

ಮುಂಬೈ: ದೇಶೀಯ ಷೇರು(Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರ (ಅ.23) ಏರಿಕೆ ಕಂಡು ಆರೋಗ್ಯಕರ ವಹಿವಾಟು ನಡೆಸಿದೆ.
ಬಿಎಸ್‌ಇ ಸೆನ್ಸೆಕ್ಸ್ 130.06 ಪಾಯಿಂಟ್‌ಗಳೊಂದಿಗೆ ಶೇ.0.15% ಏರಿಕೆಯೊಂದಿಗೆ 84,556.40 ಅಂಕಕ್ಕೆ ಜಿಗಿದಿದೆ. ನಿಫ್ಟಿ50 ಸೂಚ್ಯಂಕವು 23 ಪಾಯಿಂಟ್‌ಗಳ ಏರಿಕೆಯೊಂದಿಗೆ 25,891.40 ಅಂಕಕ್ಕೆ ಮುಕ್ತಾಯಗೊಂಡಿದೆ.ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು 0.15% ಮತ್ತು ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕವು 0.42% ಕುಸಿತದೊಂದಿಗೆ ಮುಕ್ತಾಯಗೊಂಡಿದ್ದರಿಂದ ವಿಶಾಲ ಮಾರುಕಟ್ಟೆಗಳು ಕಳಪೆ ಪ್ರದರ್ಶನ ನೀಡಿವೆ. ಅಲ್ಲದೆ, ಕಳೆದ ಆರು ದಿನಗಳಿಂದ ಷೇರುಪೇಟೆ ನಿರಂತರ ಏರಿಕೆಯಲ್ಲಿದೆ.
ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ಒಪ್ಪಂದದ ಬಗ್ಗೆ ಇರುವ ಆಶಾವಾದವು ಗುರುವಾರ ಮಾನದಂಡ ಸೂಚ್ಯಂಕಗಳನ್ನು ಸುಮಾರು 1% ರಷ್ಟು ಹೆಚ್ಚಿಸಿದೆ. ಮಿಂಟ್ ವರದಿಯ ಪ್ರಕಾರ, ಅಮೆರಿಕವು ಭಾರತದ ಮೇಲಿನ ಸುಂಕವನ್ನು ಪ್ರಸ್ತುತ 50% ರಿಂದ 15-16% ಕ್ಕೆ ಇಳಿಸುವ ಸಾಧ್ಯತೆಯಿದೆ. ಈ ಹಿನ್ನೆಲೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಆರೋಗ್ಯಕರ ವಹಿವಾಟು ನಡೆಸಿವೆ.(ಏಜೆನ್ಸೀಸ್)