ಚಲಿಸುತ್ತಿದ್ದ ವಾಹನದಲ್ಲೇ ಹೃದಯಾಘಾತವಾಗಿ ಚಾಲಕ ಸಾವು

kodagu case
Published on

ಕೊಡಗು: ಚಲಿಸುತ್ತಿದ್ದ ವಾಹನದಲ್ಲೇ ಹೃದಯಾಘಾತವಾಗಿದ್ದು, ಚಾಲಕ ಸಾವನ್ನಪ್ಪಿರುವ ಘಟನೆ ವಿರಾಜಪೇಟೆ ಸಮೀಪದ ಬಿಟ್ಟಂಗಾಲ ಬಳಿ ದುರ್ಘಟನೆ ನಡೆದಿದೆ.

ರವಿಕುಮಾರ್ (28) ಮೃತ ದುರ್ದೈವಿ. ಈತ ವಿರಾಜಪೇಟೆ ಹೊರವಲಯದ ಬಿಟ್ಟಾಂಗಲ ಬಳಿಯ ಪೆಗ್ಗರಿಕಾಡು ನಿವಾಸಿಯಾಗಿದ್ದಾನೆ.

ರವಿಕುಮಾರ್ ಪಿಕಪ್​ ವಾಹನ ಚಲಾಯಿಸಿಕೊಂಡು ಗೋಣಿಕೊಪ್ಪದಿಂದ ವೀರಾಜಪೇಟೆ ಕಡೆ ಬರುತ್ತಿದ್ದನು. ಈ ವೇಳೆ ಪಿಕ್ ಅಪ್ ವಾಹನದಲ್ಲಿ ತೆರಳುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿದೆ. ವೀರಾಜಪೇಟೆ ಕಡೆ ಬರುತ್ತಿದ್ದ ಸಂದರ್ಭ ಹೃದಯಾಘಾತವಾಗಿ ರವಿಕುಮಾರ್ ತನ್ನ ವಾಹನದಲೇ ​​ಮೃತಪಟ್ಟಿದ್ದಾನೆ.

ಇಂದು  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ, ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆದು ಮನೆಯಲ್ಲಿದ್ದ ನರ್ಸಿಂಗ್ ವಿದ್ಯಾರ್ಥಿನಿಯೋರ್ವಳು ಲೋ ಬಿಪಿ ಕಾರಣದಿಂದ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಇಂದು ನಡೆದಿದೆ. ಸುಮಾ(19) ಮೃತ ವಿದ್ಯಾರ್ಥಿನಿ. ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ನಿವಾಸಿಯಾಗಿದ್ದಾರೆ. ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದ ಈಕೆ ಲೋ ಬಿಪಿಯಿಂದ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net