VIDEO | ಮನುಷ್ಯರಂತೆ ಮೊಬೈಲ್‌ನಲ್ಲಿ ರೀಲ್‌ಗಳನ್ನು ನೋಡಿದ ಕೋತಿ...

monkey viral
Published on

ನವದೆಹಲಿ: ಮಕ್ಕಳು ಮತ್ತು ದೊಡ್ಡವರು ಸ್ಮಾರ್ಟ್‌ಫೋನ್‌ಗೆ ದಾಸರಾಗುತ್ತಿದ್ದಾರೆ. ಆದರೆ ಕೇವಲ ಮನುಷ್ಯರು ಮಾತ್ರ ಸ್ಮಾರ್ಟ್ ಫೋನ್​ಗೆ ಅಡಿಕ್ಟ್ ಆಗುತ್ತಿದ್ದಾರೆ ಎಂದುಕೊಂಡರೆ.. ಅದು ಸಂಪೂರ್ಣ ತಪ್ಪು. ಏಕೆಂದರೆ ಪ್ರಾಣಿಗಳೂ ಸ್ಮಾರ್ಟ್ ಫೋನ್ ಕ್ರೇಜ್ ಗೆ ದಾಸರಾಗಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಸೋಶಿಯಲ್​​ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್​ ಆಗಿದೆ.

ಪ್ರಾಣಿಗಳಲ್ಲಿ, ಕೋತಿಗಳು ಮನುಷ್ಯರನ್ನು ಅನುಸರಿಸುವ ಮೂಲಕ ಅನೇಕ ವಿಷಯಗಳನ್ನು ತ್ವರಿತವಾಗಿ ಕಲಿಯುತ್ತವೆ. ಈಗ ಇದಕ್ಕೆ ಸಂಬಂಧಿಸಿದ ಕ್ಲಿಪ್ ಹೊರಬಿದ್ದಿದೆ. ಈ ವಿಡಿಯೋದಲ್ಲಿ ಕೋತಿಗಳು ಕೂಡ ಮೊಬೈಲ್ ಸ್ಕ್ರೋಲಿಂಗ್ ಕಲೆಯನ್ನು ಮನುಷ್ಯರಿಂದ ಕಲಿತಿದೆ. ಮಂಗವೊಂದು ಆರಾಮವಾಗಿ ಫೋನ್ ಬಳಸುವುದನ್ನು ಕರಗತ ಮಾಡಿಕೊಂಡಿದೆ.

ವಿಡಿಯೋದಲ್ಲಿ ಏನಿದೆ?:  ಮಂಗವೊಂದು ಹಾಸಿಗೆಯ ಮೇಲೆ ಆರಾಮವಾಗಿ ಮಲಗಿ ರೀಲ್‌ಗಳನ್ನು ಮನುಷ್ಯನಂತೆ ಸ್ಕ್ರಾಲ್ ಮಾಡುವುದನ್ನು ನೀವು ನೋಡಬಹುದು. ಇದನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಈ ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆದಿದೆ.

ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಬಳಕೆದಾರರು, ಮಂಗಗಳು ನಿಜವಾಗಿಯೂ ನಮ್ಮ ಪೂರ್ವಜರು ಎಂದು ತೋರಿಸುತ್ತದೆ. ಇತರರು ಟಚ್‌ಸ್ಕ್ರೀನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿದಿದ್ದಾರೆ. ಇದಲ್ಲದೆ, ಈ ಬಗ್ಗೆ ಅನೇಕರು ವಿಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net