ಭಾರತೀಯ ಕೂದಲಿಗೆ ಭಾರೀ ಬೇಡಿಕೆ; ಒಂದು ಕೆಜಿ ಕೂದಲಿನ ಬೆಲೆ ಎಷ್ಟು ಗೊತ್ತಾ?

hair cut
Published on

ನವದೆಹಲಿ: ನಮ್ಮ ತಲೆಯಲ್ಲಿ ಕೂದಲಿರುವವರೆಗೂ ತುಂಬಾ ಕಾಳಜಿ ವಹಿಸುತ್ತೇವೆ..ಆದರೆ ಸಲೂನ್​​ನಲ್ಲಿ ಒಮ್ಮೆ ಕಟ್ ಮಾಡಿದರೆ ಅದು ನಮಗೆ ವೇಸ್ಟ್ ಗೆ ಸಮಾನ. ಆದರೆ ವೇಸ್ಟ್ ಎಂದುಕೊಳ್ಳುವ ನಮ್ಮ ಕೂದಲಿನಿಂದ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತದೆ ಗೊತ್ತಾ..? ಭಾರತೀಯ ಕೂದಲಿಗೆ ವಿಶ್ವದಲ್ಲಿ ಒಳ್ಳೆಯ ಬೇಡಿಕೆ ಇದೆ.

ಭಾರತೀಯ ಕೂದಲಿಗೆ ವಿಶ್ವದಲ್ಲಿ ಉತ್ತಮ ಬೇಡಿಕೆಯಿದೆ. ಪ್ರಪಂಚದಲ್ಲಿ ಕೂದಲು ಬೆಳೆಯುವ ರಾಷ್ಟ್ರಗಳಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಇದು ಕೇಳಲು ಹೊಸ ಮತ್ತು ಕುತೂಹಲಕಾರಿಯಾದ ವಿಷಯವೆಂದು ನಮಗೆ ಅನ್ನಿಸುತ್ತದೆ ಅಲ್ಲವೇ...

ಸಲೂನ್, ದೇವಸ್ಥಾನಗಳಲ್ಲಿ ಬಿಡುವ ಕೂದಲು ವಿದೇಶಗಳಿಗೆ ರಫ್ತಾಗುತ್ತದೆ. ತಲೆ ಕೂದಲುಗಳಿಂದ ಕೋಟಿಗಟ್ಟಲೆ ಆದಾಯ ಕೂಡಾ ಬರುತ್ತದೆ. ರಫ್ತಾಗುವ ಕೂದಲನ್ನು ಹೆಚ್ಚಾಗಿ ವಿಗ್ ತಯಾರಿಕೆಯಲ್ಲಿ ಬಳಸಲಾಗುತ್ತದೆ, ಕೆಲವು ವಿಧಗಳು. ಔಷಧ ಮತ್ತು ಇತರ ಹಲವು ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಒಂದು ಕೆಜಿ ಕೂದಲಿನ ಬೆಲೆ ಸರಿಸುಮಾರು 30 ಸಾವಿರ ಇದೆ ಎನ್ನಲಾಗಿದೆ.

ಕೂದಲನ್ನು ವಿದೇಶಗಳಿಗೆ ರಪ್ತು ಮಾಡುವಲ್ಲಿ ಭಾರತವು ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ. ಇಂಡೋನೇಷ್ಯಾ 2 ನೇ ಸ್ಥಾನದಲ್ಲಿದೆ, ಚೀನಾ ಮೂರನೇ ಸ್ಥಾನ. ಹಾಂಗ್ ಕಾಂಗ್, ಪಾಕಿಸ್ತಾನ, ಬ್ರೆಜಿಲ್ ನಂತರದ ಸ್ಥಾನದಲ್ಲಿವೆ. ಭಾರತದಲ್ಲಿ ದೊರೆಯುವ ಕೂದಲಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಭಾರತದಲ್ಲಿ ದೊರೆಯುವ ಕೂದಲು ಉತ್ತಮ ಗುಣಮಟ್ಟದ್ದಾಗಿದೆ ಹಾಗಾಗಿ ಹಲವು ದೇಶಗಳಲ್ಲಿ ಭಾರತೀಯ ಕೂದಲಿಗೆ ಬೇಡಿಕೆಯಿದೆ.

ಈ ಮೂಲಕ ಭಾರತದಿಂದ ರಫ್ತಾಗುವ ಕೂದಲಿನಿಂದ ಕೋಟಿಗಟ್ಟಲೆ ವ್ಯವಹಾರ ನಡೆಯುತ್ತಿದೆ. ಕಳೆದ 5 ವರ್ಷಗಳಲ್ಲಿ ಭಾರತದಿಂದ ಹೊರ ದೇಶಗಳಿಗೆ 3,69,39,60,500 ರೂ.ಗಳ ಕೂದಲು ರಫ್ತಾಗಿದೆ. 2022-2023ನೇ ಸಾಲಿನಲ್ಲಿ ಅತೀ ಹೆಚ್ಚು ಮೌಲ್ಯದ ಮನುಷ್ಯನ ಕೂದಲನ್ನು ವಿದೇಶಗಳಿಗೆ ರಫ್ತು ಮಾಡಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವೆ ಶ್ರೀಮತಿ ಅನುಪ್ರಿಯಾ ಪಟೇಲ್ ಅವರು ಸಂಸತ್ತಿನ ಅಧಿವೇಶನದಲ್ಲಿ ಅಧಿಕೃತವಾಗಿ ಘೋಷಿಸಿದರು.

ವಿಶ್ವದ ಹಲವು ದೇಶಗಳು ರಫ್ತು ಮಾಡುವ ಕೂದಲನ್ನು ಆಮದು ಮಾಡಿಕೊಳ್ಳುತ್ತವೆ. ಇದರಲ್ಲಿ ಇಂಡೋನೇಷ್ಯಾ ಶೇ.31ರಷ್ಟು ಕೂದಲನ್ನು ಆಮದು ಮಾಡಿಕೊಳ್ಳುತ್ತದೆ. ಆಸ್ಟ್ರೇಲಿಯಾ ಶೇ.16.5, ಮ್ಯಾನ್ಮಾರ್ ಶೇ.14.6, ವಿಯೆಟ್ನಾಂ ಮತ್ತು ಇಟಲಿ ನಂತರದ ಸ್ಥಾನದಲ್ಲಿದೆ. ನಮ್ಮ ದೇಶದಿಂದ ರಫ್ತಾಗುವ ಬಹುತೇಕ ಕೂದಲು ಪಶ್ಚಿಮ ಬಂಗಾಳ. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಹೆಚ್ಚು ಕೂದಲು ರಫ್ತು ಮಾಡುವ ರಾಜ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net