ಹುಳುಕು ಹಲ್ಲನ್ನು ಪತ್ತೆಹಚ್ಚಿ ಕೀಳುವ ಗಿಳಿ! 9 ಕೋಟಿ ವೀಕ್ಷಣೆ ಕಂಡ ಈ ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ

dentist parrot
Published on

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋಗಳು ಅಪ್​ಲೋಡ್​ ಆಗುತ್ತಿರುತ್ತವೆ. ಆದರೆ, ಕೆಲವೊಂದು ವಿಡಿಯೋಗಳು ತನ್ನ ವಿಶೇಷತೆಯಿಂದಲೇ ಸಿಕ್ಕಾಪಟ್ಟೆ ವೈರಲ್​ ಆಗಿಬಿಡುತ್ತವೆ. ಅದೇ ಸಾಲಿಗೆ ಪುಟ್ಟ ಬಾಲಕನೊಬ್ಬ ಗಿಳಿಯ ಜೊತೆಗಿರುವ ಕುತೂಹಲಕಾರಿ ಅಥವಾ ಅಚ್ಚರಿ ಮೂಡಿಸುವ ವಿಡಿಯೋ ಸೇರಿಕೊಂಡಿದೆ.

ಹುಳುಕು ಹಲ್ಲನ್ನು ಪತ್ತೆಹಚ್ಚಿ ಅದನ್ನು ಕಿತ್ತುಹಾಕುವ ಕೆಲಸ ದಂತವೈದ್ಯರದ್ದು. ಆದರೆ, ಗಿಳಿ ಆ ಕೆಲಸವನ್ನು ಮಾಡುತ್ತದೆ ಅಂದರೆ ನೀವು ನಂಬುತ್ತೀರಾ? ಈ ವಿಡಿಯೋ ನೋಡಿದ ಮೇಲೆ ನೀವು ನಂಬಲೇಬೇಕು.

ಹೌದು, ಬಾಲಕನ ಬಾಯಿಯಿಂದ ಗಿಣಿ ಹಲ್ಲು ತೆಗೆಯುತ್ತಿರುವ ವಿಡಿಯೋ ಇದೀಗ ವೈರಲ್​ ಆಗಿದೆ. ಅಚ್ಚರಿಯ ಸಂಗತಿ ಏನೆಂದರೆ, ಗಿಳಿ ಹುಳುಕಾದ ಹಲ್ಲನ್ನು ಹುಡುಕಿ ತುಂಬಾ ನಾಜೂಕಾಗಿ ಕಿತ್ತು ಹಾಕುತ್ತದೆ. ಇದನ್ನು ನೋಡಿದವರು ಒಂದು ಕ್ಷಣ ಹುಬ್ಬೇರಿಸುವುದಂತೂ ಖಚಿತ. ‘ ಈ ವಿಡಿಯೋವನ್ನು bebeginsayfasi ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಪೋಸ್ಟ್​ ಮಾಡಲಾಗಿದ್ದು, 9 ಕೋಟಿಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ ಮತ್ತು 13 ಲಕ್ಷಕ್ಕೂ ಅಧಿಕ ಲೈಕ್ಸ್​ ಬಂದಿವೆ. 7 ಸಾವಿರಕ್ಕೂ ಅಧಿಕ ಮಂದಿ ಕಾಮೆಂಟ್​ ಮಾಡಿದ್ದಾರೆ. 1900ರಲ್ಲಿ ದಂತವೈದ್ಯಶಾಸ್ತ್ರ ಅನ್ವೇಷಣೆ ಆಯಿತು. 1899ರಲ್ಲಿದ್ದ ಜನರು ಹಲ್ಲು ಕೀಳಲು ಈ ವಿಧಾನ ಬಳಸುತ್ತಿದ್ದರು ಎಂದು ನೆಟ್ಟಿಗನೊಬ್ಬರ ಹಾಸ್ಯಚಟಾಕಿ ಹಾರಿಸಿದ್ದಾರೆ.

ತುಂಬಾ ಒಳ್ಳೆಯ ದಂತವೈದ್ಯ, ಹಲ್ಲು ಕೀಳುವ ಗಿಳಿಯ ಕೌಶಲ್ಯ ಸೂಪರ್​, ಇದನ್ನು ಈಗಲೂ ಎಲ್ಲ ಕಡೆ ಜಾರಿಗೆ ತಂದರೆ ದಂತವೈದ್ಯರು ಒಂದು ಮೂಲೆಯಲ್ಲಿ ಕೂತು ಅಳಬೇಕಾಗುತ್ತದೆ ಎಂದು ನೆಟ್ಟಿಗರು ಕಾಮೆಂಟ್​ ಮೂಲಕ ಗಿಳಿಯ ಹಲ್ಲು ಕೀಳುವ ಸ್ಕಿಲ್​ ಅನ್ನು ಕೊಂಡಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net