ಲೋಕ ಸಮರ ಗೆಲ್ಲಲು 'ಕೈ' ರಣತಂತ್ರ! ಎಚ್​ಡಿ. ದೇವೇಗೌಡರಿಗೆ ಟಕ್ಕರ್ ಕೊಡಲು ರಿವರ್ಸ್ ಆಪರೇಷನ್

WhatsApp Image 2024-03-31 at 6.45.37 PM
Published on

ತುಮಕೂರು: ಲೋಕ ಸಮರ ಹೊಸ್ತಿನಲ್ಲಿ ತುಮಕೂರಿನಲ್ಲಿ ಜೋರಾಗಿದೆ ಆಪರೇಷನ್ ಸದ್ದು. ಲೋಕಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್ ರಣತಂತ್ರ ರೂಪಿಸಿದ್ದು, ಇದೀಗ ತುಮಕೂರಿಗೆ ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠರಾದ ದೇವೆಗೌಡರು ತುಮಕೂರಿಗೆ ಭೇಟಿ ಕೊಟ್ಟ ಬೆನ್ನಲ್ಲೇ ಕೈ ನಾಯಕರು ಅಲರ್ಟ್​ ಆಗಿದ್ದಾರೆ.

ನಿನ್ನೆ‌ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಎಚ್​. ನಿಂಗಪ್ಪ ಮನೆಗೆ ಎಚ್​.ಡಿ. ದೇವೇಗೌಡರು ಭೇಟಿ ನೀಡಿ, ಪಕ್ಷಕ್ಕೆ ಆಹ್ವಾನಿಸಿದ್ದಾರೆ ಎಂದಿದ್ದು, ಈ ಹಿನ್ನೆಲೆ ದಳಪತಿಗಳಿಗೆ ಶಾಕ್ ಕೊಡಲು ಮುಂದಾದ ಕೈ ನಾಯಕರು ರಿವರ್ಸ್ ಆಪರೇಷನ್ ಅಸ್ತ್ರ ಬಳಸಿದ್ದಾರೆ. ತುಮಕೂರು ‌ನಗರದ ಜೆಡಿಎಸ್​ ಮುಖಂಡ ಗೋವಿಂದರಾಜುಗೆ ಗಾಳ ಕಾಂಗ್ರೆಸ್​ ನಾಯಕರು ಗಾಳ ಹಾಕಿದ್ದಾರೆ.

ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್​ ಪರಾರ್ಜಿತ ಅಭ್ಯರ್ಥಿ ಗೋವಿಂದರಾಜು ಜತೆಗೆ ಸಹಕಾರ ಸಚಿವ ಕೆಎನ್.ರಾಜಣ್ಣ ಮನೆಯಲ್ಲಿ ಗೌಪ್ಯ ಸಭೆ ನಡೆಸಿದ್ದು, ಪಕ್ಷ ಕೈಬಿಡುವಂತೆ ತಿಳಿಸಿದ್ದಾರೆ. ಕೆ.ಎನ್. ರಾಜಣ್ಣ ಹಾಗೂ ಪರಮೇಶ್ವರ್ ನೇತೃತ್ವದಲ್ಲಿ ಮಿಟಿಂಗ್ ಆಗಿದ್ದು, ಸಭೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.

ಸಭೆಯಲ್ಲಿ ಸಚಿವ ಕೆ.ಎನ್ ರಾಜಣ್ಣ, ಪರಮೇಶ್ವರ್, ಶಾಸಕ ಎಸ್.ಆರ್ ಶ್ರೀ ನಿವಾಸ್, ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಜೆಡಿಎಸ್​ ಮುಖಂಡ ಗೋವಿಂದರಾಜು ಭಾಗಿಯಾಗಿದ್ದರು. ತೆನೆ ಇಳಿಸಿ ಕೈ ಹಿಡಿತಾರಾ ಜೆಡಿಎಸ್​ ಮುಖಂಡ? ಎಂಬುದು ಸದ್ಯಕ್ಕೆ ಪ್ರಶ್ನೆಯಾಗಿ ಉಳಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net