More

    ಶ್ರೀ ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನ ಮತ್ತು ಯಾದವ ಸಮುದಾಯ ಭವನ ಉದ್ಘಾಟನೆ

    ಮೈಸೂರು: ದೇವರಾಜ ಮೊಹಲ್ಲಾದ ದಿವಾನ್ಸ್ ರಸ್ತೆಯಲ್ಲಿ ಯಾದವ(ಗೊಲ್ಲರ) ಸಂಘದ ವತಿಯಿಂದ ನಿರ್ಮಿಸಿರುವ ಶ್ರೀ ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನ ಮತ್ತು ಯಾದವ ಸಮುದಾಯ ಭವನದ ಉದ್ಘಾಟನಾ ಸಮಾರಂಭ ನೆರವೇರಿತು.

    ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಕ್ಷೇತ್ರ ಗೊಲ್ಲಗಿರಿಯ ಅಖಿಲ ಭಾರತ ಯಾದವ ಮಹಾಸಂಸ್ಥಾನದ ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ ಉದ್ಘಾಟಿಸಿ, ಶುಭ ಹಾರೈಸಿದರು. ಒಗ್ಗಟ್ಟಿನಿಂದ ಸಂಘಟನೆ ಮುಂದುವರೆಯಬೇಕು ಹಾಗೂ ಸಂಘಟನೆಯು ನಿರಂತರವಾಗಿ ಸಮಾಜ ಸೇವ ಕಾರ್ಯಕ್ರಗಳಲ್ಲಿ ತೊಡಗಬೇಕು ಎಂದು ತಿಳಿಸಿದರು.

    ಇದೇ ವೇಳೆ ನಿವೃತ್ತ ಇಂಜಿನಿಯರ್ ದೊಡ್ಡನಾಗಯ್ಯ, ಸಮಾಜ ಸೇವಕರಾದ ಜಾನಕಿ, ಕುಮಾರದಾಸ್, ಮಾನಸ, ಬಲರಾಮ್ ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು.

    ಕರ್ನಾಟಕ ರಾಜ್ಯ ಯಾದವ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಮೈಸೂರು ಯಾದವ ಸಂಘದ ಅಧ್ಯಕ್ಷ ಡಿ.ಧ್ರುವಕುಮಾರ್, ಪದಾಧಿಕಾರಿಗಳಾದ ಜವರೇಗೌಡ, ಡಿ.ರಂಗಸ್ವಾಮಿ, ಪುಷ್ಪವಲ್ಲಿ, ಡಾ.ನಾಗೇಶ್ ಯಾದವ್, ಗೀತಾ ಯೋಗನಂದ್ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts