ಮೊದಲ ರಾತ್ರಿಯ ಖಾಸಗಿ ವಿಡಿಯೋ ಹಂಚಿಕೊಂಡ ದಂಪತಿ! ತರಾಟೆಗೆ ತೆಗೆದುಕೊಂಡ ನೆಟ್ಟಿಗರು

Wedding Night
Published on

ನವದೆಹಲಿ: ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಗೂ ಖಾಸಗಿ ಜೀವನ ಎಂಬುದಿದೆ. ಹೊರಗಿರನವರು ಅದರೊಳಗೆ ಇಣುಕಿ ನೋಡುವುದನ್ನು ಯಾರೂ ಕೂಡ ಬಯಸುವುದಿಲ್ಲ. ಖಾಸಗಿತನಕ್ಕೆ ಧಕ್ಕೆ ಉಂಟು ಮಾಡುವುದು ಕೂಡ ಕಾನೂನಿನ ಪ್ರಕಾರ ಅಪರಾಧ. ಆದರೆ, ಸಾಮಾಜಿಕ ಜಾಲತಾಣ ಜಮಾನದಲ್ಲಿ ಇಂತಹ ಪ್ರಕರಣಗಳು ಸಾಮಾನ್ಯವಾಗಿಬಿಟ್ಟಿವೆ. ಇಂದು ಖಾಸಗಿತನಕ್ಕೆ ಧಕ್ಕೆಯಾಗುತ್ತಿರುವ ಸಾಕಷ್ಟು ಘಟನೆಗಳನ್ನು ಪ್ರತಿನಿತ್ಯ ನೋಡುತ್ತಲೇ ಇರುತ್ತವೆ. ಆದರೆ, ತಮ್ಮ ಖಾಸಗಿತನಕ್ಕೆ ತಾವೇ ಧಕ್ಕೆ ತಂದುಕೊಂಡರೆ ಅಂಥರಿಗೆ ಏನನ್ನಬೇಕೋ?

ಮದುವೆ ಎಂಬದು ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಕ್ಷಣ. ಅದನ್ನು ಕೊನೆಯವರೆಗೂ ನೆನಪಿನಲ್ಲಿ ಉಳಿಯವಂತೆ ಮಾಡಲು ವಿಭಿನ್ನವಾಗಿ ಆಚರಣೆ ಮಾಡಲು ಇಷ್ಟಪಡುತ್ತಾರೆ. ಮದುವೆಯ ಬಳಿಕ ಎದುರಾಗುವ ಮೊದಲ ರಾತ್ರಿಯಂತೂ ದಂಪತಿಗಳ ವೈವಾಹಿಕ ಜೀವನಕ್ಕೆ ಹೊಸ ಅರ್ಥ ನೀಡುತ್ತದೆ. ಏಕೆಂದರೆ, ಎರಡು ದೇಹಗಳ ಜೊತೆಗೆ ಎರಡು ಮನಸ್ಸುಗಳು ಒಂದಾಗಿ ಬಾಳ ಪಯಣವನ್ನು ಒಟ್ಟಿಗೆ ಆರಂಭಿಸುವ ಮಧುರ ಕ್ಷಣ ಅದು. ಮೊದಲ ರಾತ್ರಿಯೆಂದರೆ ಅದೊಂದು ಖಾಸಗಿ ಕ್ಷಣ. ಆದರೆ, ಕ್ಷಣಕ್ಕೆ ಧಕ್ಕೆ ಉಂಟು ಮಾಡಿದರೆ ಅದಕ್ಕಿಂತ ಮಹಾಪಾರಧ ಬೇರೊಂದಿಲ್ಲ. ಆದರೆ, ಇಲ್ಲೊಂದು ಜೋಡಿ ತಮ್ಮ ಮೊದಲ ರಾತ್ರಿಯ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ನೆಟ್ಟಿಗರು ಹುಬ್ಬೇರಿಸಿರುವುದಲ್ಲದೆ ಆಕ್ರೋಶಕ್ಕೂ ಗುರಿಯಾಗಿದ್ದಾರೆ.

ನಾನು ಮೊದಲೇ ಹೇಳಿದಂತೆ ಇದು ಸೋಶಿಯಲ್​ ಮೀಡಿಯಾ ಜಮಾನ. ಜಾಲತಾಣಗಳಲ್ಲಿ ಫೇಮಸ್ ಆಗಲು ವಿವಿಧ ರೀತಿಯ ಹಾಗೂ ಚಿತ್ರವಿಚಿತ್ರ ವಿಡಿಯೋಗಳನ್ನು ಶೂಟ್ ಮಾಡುವ ಮೂಲಕ ಟ್ರೆಂಡಿಂಗ್​ನಲ್ಲಿ ಉಳಿಯಲು ಕೆಲವರು ಪ್ರಯತ್ನಿಸುತ್ತಾರೆ. ಡಾನ್ಸ್​ನಿಂದ ಹಿಡಿದು ಕುಟುಂಬದೊಂದಿಗೆ ವಿಡಿಯೋ ಚಿತ್ರೀಕರಿಸುವವರೆಗೆ ವಿವಿಧ ವಿಡಿಯೋಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ. ಆದರೆ, ಕೆಲವರು ತಮ್ಮ ಎಲ್ಲೆಯನ್ನು ಮೀರಿ, ಮುಜುಗರ ಉಂಟು ಮಾಡುವಂತಹ ವಿಡಿಯೋಗಳನ್ನು ಅಪ್​ಲೋಡ್​ ಮಾಡುತ್ತಾರೆ ಆ ಸಾಲಿಗೆ ಈ ವಿಡಿಯೋ ಸಹ ಸೇರುತ್ತದೆ.

ಆರುಶಿ ರಾಹುಲ್ ಅಫಿಶಿಯಲ್​ (arushirahulofficial) ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಪೋಸ್ಟ್​ ಮಾಡಲಾಗಿದೆ. ಆ ವಿಡಿಯೋದಲ್ಲಿ ನವವಿವಾಹಿತ ದಂಪತಿ, ತಮ್ಮ ಮೊದಲ ರಾತ್ರಿಯ ಖಾಸಗಿ ಕೋಣೆಯಲ್ಲಿರುವುದನ್ನು ಕಾಣಬಹುದು. ಇಬ್ಬರು ಸಹ ಮದುವೆ ಉಡುಗೆಯನ್ನು ಧರಿಸಿದ್ದಾರೆ. ವಧು ಆಭರಣಗಳನ್ನು ಬಿಚ್ಚುತ್ತಿರುವುದು ಮತ್ತು ಆಕೆಯ ಪತಿ ಆಭರಣಗಳನ್ನು ಹಾಗೂ ಬಟ್ಟೆ ಬಿಚ್ಚಲು ಸಹಾಯ ಮಾಡುತ್ತಿರುವುದು ಮತ್ತು ಪರಸ್ಪರ ಚುಂಬಿಸುತ್ತಿರುವ ದೃಶ್ಯವಿದೆ.

ನಾವು ಹೇಗೆ ನಮ್ಮ ಮೊದಲ ರಾತ್ರಿಯನ್ನು ಕಳೆದೆವು ಎಂದು ವಿಡಿಯೋ ಮೇಲೆ ಬರೆಯಲಾಗಿದೆ. ಈ ವಿಡಿಯೋವನ್ನು ಜ.25ರಂದು ಪೋಸ್ಟ್​ ಮಾಡಲಾಗಿದ್ದು, ಇದೀಗ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಅಲ್ಲದೆ, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಬಹಳ ಕಟುವಾದ ಪದಗಳಿಂದ ದಂಪತಿಯನ್ನು ನೆಟ್ಟಿಗರು ನಿಂದಿಸುತ್ತಿದ್ದಾರೆ. ಲೈಕ್ಸ್​ ಮತ್ತು ಶೇರ್​ಗಾಗಿ ಈ ಮಟ್ಟಕ್ಕೆ ಇಳಿಯಬಾರದು ಎಂದು ಜರಿದಿದ್ದಾರೆ.

ನೀವು ವೈರಲ್​ ಆಗಲು ಬಯಸಿದರೆ, ಮುಂದಿನ ಬಾರಿ ಇಡೀ ವಿಡಿಯೋವನ್ನು ಪೋಸ್ಟ್​ ಮಾಡಿ ಎಂದು ನೆಟ್ಟಿಗರೊಬ್ಬರು ಕಾಲೆಳೆದಿದ್ದಾರೆ. ಇದು ನಿಮ್ಮ ಖಾಸಗಿ ಕ್ಷಣ ಎಂಬುದು ನಿಮಗೆ ನೆನಪಿರಲಿ. ಇಂಥದ್ದನ್ನು ಜಾಲತಾಣದಲ್ಲಿ ಪೋಸ್ಟ್​ ಮಾಡುವ ಅಗತ್ಯವಿಲ್ಲ. ಇದು ಸಿನಿಮಾ ಅಲ್ಲ, ಇದು ನಿಜ ಜೀವನ ಎಂಬುದು ತಿಳಿದಿರಲಿ ಎಂದು ದಂಪತಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net