

ಸೊರಬ: ಜಾಗತಿಕ ಮಟ್ಟದಲ್ಲಿ ದೇಶವನ್ನು ಶ್ರೇಷ್ಠ ಸ್ಥಾನಕ್ಕೆ ಕೊಂಡೊಯ್ದ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರ ಸ್ಮರಣೀಯ ಎಂದು ಬಿಜೆಪಿ ಮುಖಂಡ ಡಾ. ಜ್ಞಾನೇಶ್ ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಬುಧವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶಕ್ಕೆ ಅಪಾಯ ಸ್ಥಿತಿ ಎದುರಾಗದಂತೆ ಮಿಲಿಟರಿ ಸೇನೆಗೆ ಹೆಚ್ಚಿನ ಒತ್ತು ನೀಡಿ ಸಶಕ್ತಗೊಳಿಸದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. ಈ ನಿಟ್ಟಿನಲ್ಲಿ ಶತ್ರು ದೇಶದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಸಮಾಜದಲ್ಲಿ ರಕ್ತದಾನ ಮಾಡುವುದು ಮಹತ್ವದ ಕಾರ್ಯ. ಕೃತಕವಾಗಿ ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಇನ್ನೊಂದು ಜೀವ ಉಳಿಸಿದ ಪುಣ್ಯ ಪಡೆಯಬೇಕು ಎಂದರು.
ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ರಾಜು, ಪ್ರಧಾನ ಕಾರ್ಯದರ್ಶಿ ಸಂಜಯ ಗೌಡ, ಹರೀಶ್, ಪುನೀತ್, ಶಶಿ ಗೌಡ, ಸಂದೀಪ, ನಂದೀಶ ಗೌಡ, ಲಿಂಗರಾಜ್, ರಮೇಶ್ ಹಸ್ವಿ, ಶ್ರೀರಾಮ್, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಪ್ರಕಾಶ್, ಪ್ರಮುಖರಾದ ಜಾನಕಪ್ಪ, ಗೀತಾ ಮಲ್ಲಿಕಾರ್ಜುನ್, ಪಾಣಿ ರಾಜಪ್ಪ, ಸುರೇಶ್, ಶಿವಕುಮಾರ್, ಮಲ್ಲಿಕಾರ್ಜುನ, ವಿಜೆಯೇಂದ್ರ ಪಾಟೀಲ್, ನಿವೇದಿತಾ, ಪ್ರಕಾಶ್ ತಲಕಾಲಕೊಪ್ಪ ಇದ್ದರು.