

ಕರೊನಾ ವೈರಸ್ ಆತಂಕ ದಿನೇದಿನೆ ಹೆಚ್ಚುತ್ತಿದೆ. ಭಾರತಕ್ಕೆ ಕರೊನಾ ವೈರಸ್ನಿಂದ ಹೆಚ್ಚೇನೂ ಅಪಾಯವಾಗುವುದಿಲ್ಲ ಎಂದು ಈಗಾಗಲೇ ಹಲವು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ. ಆದರೂ ದಿನೇದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದನ್ನು ನೋಡುತ್ತಿದ್ದರೆ ಸಹಜವಾಗಿ ಆತಂಕ ಆಗುತ್ತಿದೆ.
ಹೀಗಿರುವಾಗ ಚಿಕ್ಕಮಗಳೂರಿನ ಕೊಪ್ಪದ ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ ಅವರು ಸಮಾಧಾನಕರ ವಿಷಯವೊಂದನ್ನು ಹೇಳಿದ್ದಾರೆ.
ಕರೊನಾ ಸೋಂಕಿನ ಪ್ರಮಾಣ ಮೇ 15ರ ನಂತರ ಕಡಿಮೆಯಾಗಲಿದೆ. ಹಾಗಾಗಿ ಹೆದರಬೇಕಾಗಿಲ್ಲ. ಆದರೆ ಇನ್ನೂ ಎರಡು ವರ್ಷ ಆರ್ಥಿಕ ಯುದ್ಧ ಎದುರಾಗುತ್ತದೆ. ಅದಕ್ಕೆ ನಾವು ಸಿದ್ಧರಾಗಬೇಕು ಎಂದು ಹೇಳಿದ್ದಾರೆ.
ನಾವು ಇನ್ನೂ ಎರಡು ವರ್ಷ ಗಾಂಧೀಜಿಯವರು ಹೇಳಿದಂತೆ ಸರಳ ಜೀವನ ನಡೆಸಬೇಕು. ಇಲ್ಲದವರಿಗೆ ಇದ್ದವರು ಸಹಾಯ ಮಾಡಬೇಕು. ಪ್ರವಾಸ, ಶಾಪಿಂಗ್ ಎಂದು ವೃಥಾ ಖರ್ಚು ಮಾಡುವ ಬದಲು ಅಗತ್ಯವಿರುವ ಧಾನ್ಯವನ್ನು ಸಂಗ್ರಹಿಸಿಕೊಳ್ಳೋಣ. 10-11 ಜೊತೆ ಬಟ್ಟೆಗಳ ಖರೀದಿ ಮಾಡುವ ಬದಲು, 3-4 ಜೊತೆ ಖರೀದಿಸೋಣ.
ಎಲ್ಲವನ್ನೂ ಸರ್ಕಾರವೇ ಮಾಡಲಿ ಎಂದು ಕುಳಿತುಕೊಳ್ಳಬಾರದು. ನಮ್ಮ ಕೈಲಾದಷ್ಟು ಸಹಾಯವನ್ನು ಬಡವರಿಗೆ ಮಾಡಬೇಕು ಎಂದು ವಿನಯ್ ಗುರೂಜಿ ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್)
ಇದನ್ನೂ ಓದಿ: ಈ ಔಷಧಕ್ಕಿದೆಯಂತೆ ಕರೊನಾ ಗುಣಪಡಿಸುವ ಶಕ್ತಿ…!