ಆಟವಾಡುತ್ತಿದ್ದ ಮಕ್ಕಳ ಮೇಲೆ ಕುಸಿದ ಮೇಲ್ಛಾವಣಿ; ಓರ್ವ ಬಾಲಕ ಸಾವು, ಮೂವರಿಗೆ ಗಂಭೀರ ಗಾಯ

Roof
Published on

ಬಸವಕಲ್ಯಾಣ: ಇಲ್ಲಿನ ಮಂಠಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಚೇರಿಯ ಕಟ್ಟಡದ ಮುಂದಿನ ಛಾವಣಿ ಕುಸಿದು 11 ವರ್ಷದ ಬಾಲಕ ಮೃತಪಟ್ಟಿದ್ದು, ಮೂರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪ್ರಜ್ವಲ್ ಶ್ರೀನಾಥ್ ಮೃತ ಬಾಲಕ. ದಿನೇಶ್​ ಭೀಮಣ್ಣ (12), ಆಕಾಶ್​ ಭೀಮಣ್ಣ (10), ಚರಣ್​ ತಾನಾಜಿ (10) ತೀವ್ರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಕರೊನಾ ಲಸಿಕೆ, ಖರೀದಿ, ವಿತರಣೆ ನಿರ್ಧರಿಸಲಿದೆ ಈ ಸಮಿತಿ; ಕೇಂದ್ರೀಯ ಟಾಸ್ಕ್​ಪೋರ್ಸ್​ ರಚನೆ

ಗ್ರಾಮದ ಮಹಾದೇವ ಮಂದಿರ ಸಮೀಪ ಇರುವ ಪಿಕೆಪಿಎಸ್​ ಕಟ್ಟಡದ ಮುಂಭಾಗದಲ್ಲಿದ್ದ ಮೇಲ್ಛಾವಣಿ ದಿಢೀರನೆ ಕುಸಿದು ಬಿದ್ದಿದೆ. ಈ ವೇಳೆ ಕಟ್ಟಡದ ಕೆಳಗೆ ನಾಲ್ವರು ಮಕ್ಕಳು ಆಟವಾಡುತ್ತಿದ್ದರು. ಅದರಲ್ಲಿ ಓರ್ವ ಮೃತಪಟ್ಟಿದ್ದು, ಚರಣ ಎನ್ನುವ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ.

ಗಾಯಾಳು ಬಾಲಕರನ್ನು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕಟ್ಟಡ ಸುಮಾರು 40 ವರ್ಷಗಳಷ್ಟು ಹಳೆಯದಾಗಿದ್ದು, ಮಳೆಯಿಂದ ಛಾವಣಿ ಕುಸಿದಿರಬಹುದು ಎಂದು ಶಂಕಿಸಲಾಗಿದೆ. ಸಿಪಿಐ ಮಹೇಶಗೌಡ ಪಾಟೀಲ, ಪಿಎಸ್ಐ ಜಯಶ್ರೀ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net