

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ಟ್ಯಾಂಪರಿಂಗ್ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಕಾಂಗ್ರೆಸ್ ನಾಯಕ ಜೀತೂ ಪಟವಾರಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಜೀತೂ ಅವರು ನರೇಂದ್ರ ಮೋದಿಯವರ ಫೋಟೋವನ್ನು ಕೆಟ್ಟದಾಗಿ ತಿದ್ದಿ, ಅವಹೇಳನ ಮಾಡಿದ್ದಾರೆ ಎಂದು ಬಿಜೆಪಿ ನಾಯಕ ಗೌರವ್ ರಾಂಡಿವ್ ಅವರು ಪೊಲೀಸರಿಗೆ ದೂರು ನೀಡಿದ್ದರು.
ಅಷ್ಟೇ ಅಲ್ಲ, ಪಟವಾರಿ ಅವರನ್ನು ವಿಧಾನಸಭಾ ಸದಸ್ಯನ ಸ್ಥಾನದಿಂದ ಅಮಾನತು ಮಾಡಲು ಮಧ್ಯಪ್ರದೇಶದ ಸ್ಪೀಕರ್ಗೆ ಮನವಿ ಮಾಡುವುದಾಗಿಯೂ ರಾಂಡಿವ್ ತಿಳಿಸಿದ್ದಾರೆ. ಇದನ್ನೂ ಓದಿ: ‘ಹಿಂದಿ ಮಾತನಾಡಲು ಬರದಿದ್ದ ನೀವೊಬ್ಬರು ಭಾರತೀಯರಾ?’
ರಾಮಮಂದಿರ ಭೂಮಿಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿದ್ದ ಫೋಟೋವೊಂದನ್ನು ಪಟವಾರಿ ಟ್ಯಾಂಪರ್ ಮಾಡಿದ್ದರು ಎನ್ನಲಾಗಿದೆ. (ಏಜೆನ್ಸೀಸ್)