

ಬೆಂಗಳೂರು: ನನೆಗುದಿಗೆ ಬಿದ್ದಿರುವ ಸಬ್‌ಇನ್‌ಸ್ಪೆಕ್ಟರ್ 545 ಹುದ್ದೆಗಳ ನೇಮಕಾತಿ ಲಿತಾಂಶ ಪ್ರಕಟಿಸುವಂತೆ ಖುದ್ದು ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪತ್ರ ಬರೆದರೂ ಬೆಲೆ ಇಲ್ಲದಂತಾಗಿದೆ.
ರಾಜ್ಯ ಸರ್ಕಾರ 2020ರಲ್ಲಿ ನೇಮಕಾತಿಗೆ ಅರ್ಜಿ ಕರೆದು ಕೊನೆಗೆ ಹಗರಣದಲ್ಲಿ ಸಿಲುಕಿ ಹೈಕೋರ್ಟ್ ತೀರ್ಪಿನಂತೆ ಜನವರಿಯಲ್ಲಿ ಮರು ಪರೀಕ್ಷೆ ನಡೆಸಿದರೂ ಲಿತಾಂಶ ಪ್ರಕಟವಾಗಿಲ್ಲ. ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಬೇಕು ಎಂದುಕೊಳ್ಳುವಷ್ಟರಲ್ಲಿ ಕಲ್ಯಾಣ ಕರ್ನಾಟಕ ಮೀಸಲಾತಿ 2023ರ ಫೆ.1ರ ಸುತ್ತೋಲೆ ಜಟಾಪಟಿ ಕೋರ್ಟ್ ಮೆಟ್ಟಿಲೇರಿತ್ತು. ಈ ಎಲ್ಲವನ್ನು ಪರಾಮರ್ಶೆ ಮಾಡಿದ ಸಿಎಂ, 545 ಪಿಎಸ್‌ಐ (ಸಿವಿಲ್) ಹುದ್ದೆಗಳ ನೇರ ನೇಮಕಾತಿಯ ಅಧಿಸೂಚನೆಯು 2021ರ ಜ.21ರಂದು ಹೊರಡಿಸಲಾಗಿತ್ತು. ಅಂದರೆ 371ಜೆ ಮೀಸಲಾತಿ ಕುರಿತು ಹೊರಡಿಸುವ ಸುತ್ತೋಲೆಗೂ (2023ರ ಫೆ.1) ಎರಡು ವರ್ಷಗಳ ಮೊದಲು ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ.
ಪ್ರಸ್ತುತ ರಾಜ್ಯ ಆಡಳಿತ ನ್ಯಾಯ ಮಂಡಳಿಯಲ್ಲೂ ಈ ಸುತ್ತೋಲೆಯ ಸಿಂಧುತ್ವದ ಸಂಬಂಧ ದಾಖಲಾಗಿರುವ ಅರ್ಜಿಯು ಜನವರಿ 1ರ ತೀರ್ಪಿನಲ್ಲಿ ರದ್ದುಪಡಿಸಿದೆ. ಈ ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ರಿಟ್ ಅರ್ಜಿ ಸಂಬಂಧ ತೀರ್ಪಿಗೆ ಒಳಪಟ್ಟು ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ 2018 ಮತ್ತು 2020ರ ಅನ್ವಯ ಲಿತಾಂಶ ಪ್ರಕಟಿಸುವಂತೆ ಗೃಹ ಇಲಾಖೆಗೆ ಸೆ.19ರಂದು ಸಿಎಂ ಆದೇಶಿಸಿದ್ದಾರೆ. ಇದಕ್ಕೆ ಗೃಹ ಸಚಿವರು ಒಪ್ಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೂ 2023ರ ೆ.1ರ ಸುತ್ತೋಲೆ ಮುಂದಿಟ್ಟುಕೊಂಡು ಕಾಣದ ಕೈಗಳು ವಿಳಂಬ ಅನುಸರಿಸುತ್ತಿವೆ. 4 ವರ್ಷಗಳಿಂದ ಒಂದಿಲ್ಲೊಂದು ಕಾರಣಕ್ಕೆ ವಿಳಂಬವಾಗುತ್ತಿರುವ ಅಭ್ಯರ್ಥಿಗಳು ಮದುವೆ ಸೇರಿ ಹಲವು ಕನಸುಗಳನ್ನು ಮುಂದೂಡಿಕೊಂಡು ನೋವಿನಲ್ಲಿ ಕಾಲ ಕಳೆಯುತ್ತಿದ್ದಾರೆ.
545 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸಿಎಂ ಅನುಮೋದನೆಗೆ ಸಡ್ಡು ಹೊಡೆದು ಸೆ.27ರವರೆಗೂ ಪ್ರಕ್ರಿಯೆ ನಿಲ್ಲಿಸುವಂತೆ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ. ಸಿಎಂ, ಗೃಹ ಸಚಿವರ ಸೂಚನೆ ಇದ್ದರೂ ಲಿತಾಂಶ ಹೊರಡಿಸಲು ಸಾಧ್ಯವಾಗಿಲ್ಲ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.
ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಮೀಸಲಾತಿ ನೀಡುವಾಗ 2023ರ ಫೆ.1ರ ಸುತ್ತೋಲೆ ಅನ್ವಯ ಮೆರಿಟ್ (ಅರ್ಹತಾ) ಪಟ್ಟಿ ತಯಾರಿಸಬೇಕು. ಮೆರಿಟ್ ಅಭ್ಯರ್ಥಿ ಯಾವುದೇ ವೃಂದ ಆಯ್ಕೆ ಮಾಡಿಕೊಂಡಿದ್ದರೂ ಅದನ್ನು ಪರಿಗಣಿಸದೆ ಮಿಕ್ಕುಳಿದ ವೃಂದದಲ್ಲಿ ತುಂಬಬೇಕು. ಬಳಿಕ ಕಲ್ಯಾಣ ಕರ್ನಾಟಕ ಮೀಸಲಾತಿ ಅಡಿ ಮೀಸಲಿಟ್ಟ ಹುದ್ದೆಗಳಿಗೆ ಪರಿಗಣಿಸಬೇಕೆಂದು ಸುತ್ತೋಲೆ ತಿಳಿಸಲಿದೆ. ಈ ಸುತ್ತೋಲೆ ಲಿತಾಂಶ ಪ್ರಕಟವಾಗದ ಎಲ್ಲ ನೇಮಕಾತಿಗೂ ಅನ್ವಯ ಆಗಲಿದೆ ಎಂದು ಉಲ್ಲೇಖಿಸಲಾಗಿದೆ. ಪರಿಣಾಮ ಹಗರಣದ ಸುಳಿಯಲ್ಲಿ ಸಿಲುಕಿದ್ದ 545 ಪಿಎಸ್‌ಐ ಮತ್ತು 402 ಎಸ್‌ಐ ಹುದ್ದೆಗಳ ನೇಮಕಾತಿಗೆ 2020ರಲ್ಲೇ ಅಧಿಸೂಚನೆ ಹೊರಡಿಸಿದ್ದರೂ ಈ ಸುತ್ತೋಲೆಯನ್ನು ಅನ್ವಯ ಮಾಡಬೇಕೆಂಬುದು ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳ ವಾದವಾಗಿದೆ. ಇದಕ್ಕೆ ಆಕ್ಷೇಪಿಸಿರುವ ಮಿಕ್ಕುಳಿದ ಜಿಲ್ಲೆಗಳ ಅಭ್ಯರ್ಥಿಗಳು, ಅಧಿಸೂಚನೆಯಂತೆ ಆಯ್ಕೆ ಪಟ್ಟಿ ಪ್ರಕಟಿಸಬೇಕೆಂದು ಒತ್ತಾಯ ಮಾಡುತ್ತಿದ್ದಾರೆ.