ಮದ್ವೆ ಮಂಟಪಕ್ಕೆ ದಿಢೀರ್​ ಎಂಟ್ರಿ ಕೊಟ್ಟ ಮಾಜಿ ಪ್ರಿಯಕರನನ್ನು ಕಂಡು ವಧು ಶಾಕ್​! ಮುಂದೇನಾಯ್ತು?

Marriage
Published on

ನವದೆಹಲಿ: ಭಾರತದಲ್ಲಿ ಇದೀಗ ಮದುವೆ ಸೀಸನ್. ಹೀಗಾಗಿ ಮದುವೆ ಸಂಬಂಧಿಸಿದ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ವಿಡಿಯೋಗಳು ವಿಶೇಷ ಕಾರಣಕ್ಕೆ ವೈರಲ್​ ಆಗಿಬಿಡುತ್ತವೆ. ಕೆಲವೊಂದು ಫನ್ನಿಯಾಗಿದ್ದರೆ, ಇನ್ನು ಕೆಲವು ವಿಡಿಯೋಗಳು ವಾಗ್ವಾದ ಮತ್ತು ಹೈಡ್ರಾಮಕ್ಕೆ ಸಾಕ್ಷಿಯಾಗುತ್ತವೆ. ಇದೀಗ ಅಂಥದ್ದೇ ವಿಡಿಯೋ ವೈರಲ್​ ಆಗಿದೆ.

ಮದುವೆ ಸಮಾರಂಭದ ವೇಳೆ ವೇದಿಕೆಗೆ ದಿಢೀರ್​ ಎಂಟ್ರಿ ಕೊಟ್ಟ ಮಾಜಿ ಬಾಯ್​ಫ್ರೆಂಡ್​ನನ್ನು ನೋಡಿ ವಧು ಶಾಕ್​ ಆದ ದೃಶ್ಯ ಸದ್ಯ ವೈರಲ್ ಆಗುತ್ತಿರುವ​ ವಿಡಿಯೋದಲ್ಲಿದೆ. ವೇದಿಕೆಯ ಮೇಲೆ ಬಂದ ಬಾಯ್​ಫ್ರೆಂಡ್​ ಅಲ್ಲಿದ್ದವರ ಜತೆ ವಾಗ್ವಾದಕ್ಕೆ ಇಳಿಯುವ ಮೂಲಕ ಕೆಲ ಕಾಲ ಹೈಡ್ರಾಮ ಸೃಷ್ಟಿಸಿದನು. ಈ ಅನಿರೀಕ್ಷಿತ ಘಟನೆಯಿಂದ ಅಚ್ಚರಿಗೊಂಡ ವರ ಮದುವೆ ಮಂಟಪದ ವೇದಿಕೆಯಿಂದ ಕೆಳಗಿಳಿದು ಮಾಜಿ ಬಾಯ್​ಫ್ರೆಂಡ್​ ವಾಗ್ವಾದವನ್ನು ವೀಕ್ಷಿಸುತ್ತಿರುವ ದೃಶ್ಯವೂ ಸಹ ವಿಡಿಯೋದಲ್ಲಿದೆ.

ಆದರೆ, ಈ ವೀಡಿಯೋ ನೋಡಿದರೆ ಇದು ನಿಜವಾಗಿ ನಡೆದಿದೆಯೋ ಅಥವಾ ಕೆಲವು ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್​ ಗಿಟ್ಟಿಸಲು ಫನ್​ಗಾಗಿ ಮಾಡಿದ್ದಾರೋ ಸ್ಪಷ್ಟವಾಗಿಲ್ಲ ಮತ್ತು ಇದು ಎಲ್ಲಿ ನಡೆದಿದೆ ಎಂಬುದರ ಮಾಹಿತಿಯೂ ಇಲ್ಲ. ವಿಡಿಯೋ ಮಾತ್ರ ಸಿಕ್ಕಾಪಟ್ಟೆ ವೈರಲ್​ ಆಗುತ್ತಲೇ ಇದೆ.

fun2eg_team ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್​ ಮಾಡಲಾಗಿದೆ. ಇದುವರೆಗೂ ಈ ವಿಡಿಯೋಗೆ 5 ಲಕ್ಷಕ್ಕೂ ಅಧಿಕ ಲೈಕ್ಸ್​ ಬಂದಿವೆ. ವಿಡಿಯೋ ನೋಡಿದವರು ಇದು ಕೇವಲ ಫನ್​ಗಾಗಿ ಮಾಡಲಾಗಿದೆ ಎಂದು ಕಾಮೆಂಟ್​ ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net