

ಭಾರತದ ವಾಯುಪಡೆ ಸಾಮರ್ಥ್ಯವನ್ನು ಹೆಚ್ಚಿಸಲು ರಕ್ಷಣಾ ಸಚಿವಾಲಯವು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಜೊತೆ 62,700 ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದ ಪ್ರಕಾರ 156 ‘ಪ್ರಚಂಡ’ ಲಘು ಯುದ್ಧ ಹೆಲಿಕಾಪ್ಟರ್ಗಳನ್ನು ಖರೀದಿ ಮಾಡಲಾಗುತ್ತದೆ. ಮೂರು ವರ್ಷಗಳಲ್ಲಿ ಸೇನೆಗೆ ಕಾಪ್ಟರ್ಗಳ ವಿತರಣೆ ಆರಂಭವಾಗಿ ಐದು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಇದರ ಜೊತೆಗೆ ಓಇ-135 ಇಂಧನ ತುಂಬುವ ವಿಮಾನ ಖರೀದಿ ಒಪ್ಪಂದವೂ ಏರ್ಪಟ್ಟಿದೆ. 2024-25ರಲ್ಲಿ ಒಟ್ಟು 2,09,050 ಕೋಟಿ ರೂ. 193 ರಕ್ಷಣಾ ಒಪ್ಪಂದಗಳನ್ನು ಸರ್ಕಾರ ಮಾಡಿಕೊಂಡಿದ್ದು, ಆತ್ಮನಿರ್ಭರ ಭಾರತವನ್ನು ಇದು ಬಲಪಡಿಸಿದೆ.
5,000 ಮೀಟರ್ಗಿಂತಲೂ ಹೆಚ್ಚು ಎತ್ತರದಲ್ಲಿ (16,400 ಅಡಿ) ಕಾರ್ಯನಿರ್ವಹಿಸುವ ಸಾಮರ್ಥ್ಯ. 20 ಎಂಎಂ ಗನ್, 70 ಎಂಎಂ ರಾಕೆಟ್ ವ್ಯವಸ್ಥೆ, ಲಘು ಕ್ಷಿಪಣಿಗಳ ಮೂಲಕ ದಾಳಿ ನಡೆಸಬಹುದು.ಸಿಯಾಚಿನ್ ಗ್ಲೇಶಿಯರ್ ಮತ್ತು ಪೂರ್ವ ಲಡಾಖ್ನಂತಹ ಎತ್ತರದ ಪ್ರದೇಶಗಳಲ್ಲಿ ಆಕ್ರಮಣಕಾರಿ ಕಾರ್ಯಾಚರಣೆ. ನಿಖರ ದಾಳಿಗೆ ಈ ಹೆಲಿಕಾಪ್ಟರ್ ಸೂಕ್ತ. 5.8 ಟನ್ ಸಾಮರ್ಥ್ಯದ ಹಗುರ ಯುದ್ಧ ಹೆಲಿಕಾಪ್ಟರ್. ಸ್ವದೇಶಿ ತಂತ್ರಜ್ಞಾನ. ಪ್ರಸ್ತುತ 45% ಸ್ವದೇಶಿ ಉಪಕರಣಗಳಿಂದ ಪ್ರಚಂಡ ಉತ್ಪಾದನೆ. ಇದನ್ನು 65%ಕ್ಕೆ ಹೆಚ್ಚಿಸುವ ಗುರಿ.
ಪ್ರಚಂಡ ಒಂದು ಶಕ್ತಿಶಾಲಿ ಹೆಲಿಕಾಪ್ಟರ್. ಹೊಸ ಒಪ್ಪಂದವು ಭಾರತದ ಯುದ್ಧ ಸಾಮರ್ಥ್ಯ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಗೆ ಉತ್ತೇಜನ ನೀಡುತ್ತದೆ. | ರಾಜನಾಥ್ ಸಿಂಗ್ ರಕ್ಷಣಾ ಸಚಿವ