ಈ ದಿನದಂದು ಹೊರಬೀಳಲಿದೆ ಬಹುನಿರೀಕ್ಷಿತ 'ದಳಪತಿ 68' ಫಸ್ಟ್ ಲುಕ್!

Untitled design (4)
Published on

ತಮಿಳುನಾಡು: ತಮಿಳು ಚಿತ್ರರಂಗದ ಸ್ಟಾರ್​ ನಟ ದಳಪತಿ ವಿಜಯ್​ ಮತ್ತು ವೆಂಕಟ್​ ಪ್ರಭು ಕಾಂಬಿನೇಷನ್​ನಲ್ಲಿ ಮೂಡಿಬರಲಿರುವ ಬಹುನಿರೀಕ್ಷಿತ 'ದಳಪತಿ 68' ಚಿತ್ರದ ಕುರಿತಂತೆ ಈಗ ಹೊಸ ಅಪ್ಡೇಟ್​ವೊಂದು ಲಭಿಸಿದೆ. ಈ ಸುದ್ದಿ ವಿಜಯ್​ ಅಭಿಮಾನಿಗಳ ಕಾತರವನ್ನು ಮತ್ತಷ್ಟು ಹೆಚ್ಚಿಸಿದ್ದು, ಯಾವ ದಿನದಂದು ಫಸ್ಟ್​ ಲುಕ್​ ಅನಾವರಣಗೊಳ್ಳಲಿದೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.

ಇತ್ತೀಚೆಗಷ್ಟೇ ವಿಜಯ್​ ಮತ್ತು ತ್ರಿಶಾ ಕೃಷ್ಣನ್​ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ ಪ್ಯಾನ್​ ಇಂಡಿಯಾ 'ಲಿಯೋ' ಸಿನಿಮಾ ಜಾಗತಿಕ ಬಿಡುಗಡೆಯನ್ನು ಕಂಡು ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಯಶಸ್ಸನ್ನು ಗಳಿಸಿತು. ಲೋಕೇಶ್​ ಕನಕರಾಜ್​ ನಿರ್ದೇಶನದ ಈ ಚಿತ್ರವು ಸಿನಿಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಪಡೆದುಕೊಳ್ಳುವುದರ ಜತೆಗೆ ಅತೀ ಶೀಘ್ರವೇ ಒಟಿಟಿ ಪ್ಲಾಟ್​ಫಾರ್ಮ್​ಗೂ ಲಗ್ಗೆಯಿಟ್ಟಿದೆ.

ಇದೀಗ 'ದಳಪತಿ 68' ಚಿತ್ರವನ್ನು ಎದುರು ನೋಡುತ್ತಿರುವ ವಿಜಯ್​ ಅಭಿಮಾನಿಗಳಿಗೆ ಚಿತ್ರದ ಫಸ್ಟ್​ ಲುಕ್​ ಬಗ್ಗೆ ಮಾಹಿತಿ ದೊರೆತ್ತಿದ್ದು, ಸಿನಿಮಾದ ಫಸ್ಟ್​ ಲುಕ್​ ಹಾಗೂ ಟೈಟಲ್​ ಹೊಸ ವರ್ಷದ ಮೊದಲ ದಿನದಂದು ಅನಾವರಣಗೊಳ್ಳಲಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ. ಆದ್ರೆ, ಈ ಸುದ್ದಿ ಇನ್ನೂ ದೃಢಪಟ್ಟಿಲ್ಲವಾದರೂ, ಕಾಲಿವುಡ್​ ಅಂಗಳದಲ್ಲಿ ಸದ್ಯ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

ಚಿತ್ರದಲ್ಲಿ ವಿಜಯ್​, ಪ್ರಭುದೇವ, ಪ್ರಶಾಂತ್, ಸ್ನೇಹಾ, ಲೈಲಾ, ಮೀನಾಕ್ಷಿ ಚೌದ್ರಿ, ಅಜ್ಮಲ್, ಮೈಕ್ ಮೋಹನ್, ಜಯರಾಮ್, ಯೋಗಿ ಬಾಬು ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net