More

  ಐಸಿಸಿ ಏಕದಿನ ವಿಶ್ವಕಪ್ ತಂಡಕ್ಕೆ ರೋಹಿತ್ ನಾಯಕ: ವಿರಾಟ್ ಕೊಹ್ಲಿ ಆರು ಭಾರತೀಯ ಆಟಗಾರರಿಗೆ ಸ್ಥಾನ, ಆಸೀಸ್‌ನ ಇಬ್ಬರು ಮಾತ್ರ ಆಯ್ಕೆ

  ದುಬೈ: ತವರಿನಲ್ಲಿ ಏಕದಿನ ವಿಶ್ವಕಪ್ ಟ್ರೋಫಿ ಜಯಿಸುವಲ್ಲಿ ಆತಿಥೇಯ ಭಾರತ ಎಡವಿದರೂ, ಟೂರ್ನಿಯಲ್ಲಿ ತೋರಿದ ಅಮೋಘ ನಿರ್ವಹಣೆಯಿಂದಾಗಿ ಐಸಿಸಿ ಸೋಮವಾರ ಪ್ರಕಟಿಸಿರುವ 2023ರ ಏಕದಿನ ವಿಶ್ವಕಪ್ ಟೂರ್ನಿಯ ಕನಸಿನ ತಂಡದಲ್ಲಿ ಆರು ಭಾರತೀಯ ಆಟಗಾರರು ಸ್ಥಾನ ಪಡೆದಿದ್ದು, ನಾಯಕರಾಗಿ ರೋಹಿತ್ ಶರ್ಮ ಆಯ್ಕೆಯಾಗಿದ್ದಾರೆ. ಸರಣಿಶ್ರೇಷ್ಠ ವಿರಾಟ್ ಕೊಹ್ಲಿ, ಕನ್ನಡಿಗ ಕೆಎಲ್ ರಾಹುಲ್, ಆಲ್ರೌಂಡರ್ ರವೀಂದ್ರ ಜಡೇಜಾ, ವೇಗಿಗಳಾದ ಜಸ್‌ಪ್ರೀತ್ ಬುಮ್ರಾ ಹಾಗೂ ಮೊಹಮದ್ ಶಮಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
  ದಾಖಲೆಯ 6ನೇ ಬಾರಿಗೆ ಚಾಂಪಿಯನ್ ಎನಿಸಿದ ಆಸ್ಟ್ರೇಲಿಯಾ ತಂಡದಿಂದ ಗ್ಲೆನ್ ಮ್ಯಾಕ್ಸ್‌ವೆಲ್, ಆಡಂ ಜಂಪಾ ಸ್ಥಾನ ಪಡೆದರೆ, 4 ಶತಕದೊಂದಿಗೆ 594 ರನ್ ಕಲೆಹಾಕಿದ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್ ಟೂರ್ನಿಯ 2ನೇ ಗರಿಷ್ಠ ರನ್ ಸ್ಕೋರರ್ ರೋಹಿತ್ (597) ಅವರೊಂದಿಗೆ ಆರಂಭಿಕನಾಗಿ ಸ್ಥಾನ ಪಡೆದುಕೊಂಡಿದ್ದಾರೆ. 765 ರನ್ ಪೇರಿಸಿರುವ ವಿರಾಟ್ ಕೊಹ್ಲಿ ಹಾಗೂ 10 ಪಂದ್ಯಗಳಲ್ಲಿ 552 ರನ್ ಕಲೆಹಾಕಿದ ನ್ಯೂಜಿಲೆಂಡ್‌ನ ಡೆರಿಲ್ ಮಿಚೆಲ್ ಜತೆಗೆ 11 ಪಂದ್ಯಗಳಲ್ಲಿ 452 ರನ್‌ಗಳಿಸಿದ ಕೆಎಲ್ ರಾಹುಲ್ ವಿಕೆಟ್ ಕೀಪರ್-ಬ್ಯಾಟರ್ ಆಗಿ ತಂಡದಲ್ಲಿದ್ದಾರೆ. ಆಲ್ರೌಂಡರ್‌ಗಳಾಗಿ ಮ್ಯಾಕ್ಸ್‌ವೆಲ್, ಜಡೇಜಾ ಜತೆಗೆ 21 ವಿಕೆಟ್ ಉರುಳಿಸಿರುವ ಬುಮ್ರಾ, 7 ಪಂದ್ಯಗಳಲ್ಲಿ 24 ವಿಕೆಟ್ ಪಡೆದ ಮೊಹಮದ ಶಮಿ, 21 ವಿಕೆಟ್ ಸಂಪಾದಿಸಿದ ಶ್ರೀಲಂಕಾದ ದಿಲ್ಶಾನ್ ಮಧುಶಂಕ , ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್ ಆಡಂ ಜಂಪಾ (23) ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡರೆ, ಹರಿಣಗಳ ವೇಗಿ ಗೆರಾಲ್ಡ್ ಕೋಟ್‌ಜೀ (20) 12ನೇ ಆಟಗಾರನಾಗಿ ಸ್ಥಾನ ಪಡೆದಿದ್ದಾರೆ. ಉಳಿದಂತೆ ಪಾಕಿಸ್ತಾನ, ನೆದರ್ಲೆಂಡ್, ಅ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್‌ನ ಒಬ್ಬ ಆಟಗಾರರೂ ತಂಡದಲ್ಲಿಲ್ಲ.
  ಐಸಿಸಿ ಏಕದಿನ ವಿಶ್ವಕಪ್ ತಂಡ: ರೋಹಿತ್ ಶರ್ಮ (ನಾಯಕ), ಕ್ವಿಂಟನ್ ಡಿ ಕಾಕ್ (ವಿ.ಕೀ). ವಿರಾಟ್ ಕೊಹ್ಲಿ, ಡೆರಿಲ್ ಮಿಚೆಲ್, ಕೆಎಲ್ ರಾಹುಲ್(ವಿ.ಕೀ), ಗ್ಲೆನ್ ಮ್ಯಾಕ್ಸ್‌ವೆಲ್, ರವಿಂದ್ರ ಜಡೇಜಾ, ಜಸ್‌ಪ್ರೀತ್ ಬುಮ್ರಾ, ಮೊಹಮದ್ ಶಮಿ, ಆಡಂ ಜಂಪಾ, ದಿಲ್ಶಾನ್ ಮಧುಶಂಕ. 12ನೇ ಆಟಗಾರ: ಗೆರಾಲ್ಡ್ ಕೋಟ್ ಜೀ.

  ರಾಜ್ಯೋತ್ಸವ ರಸಪ್ರಶ್ನೆ - 21

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts