'ರಿಟರ್ನ್ ಮೈ ಚಾಕಲೇಟ್'…ಅಮೆರಿಕದಲ್ಲಿ ಮಾಹಿ ಮೇಲೆ ಪ್ರೀತಿಯ ಸುರಿಮಳೆಗೈದ ಅಭಿಮಾನಿಗಳು

dhoni
Published on

ಅಮೆರಿಕ: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅಮೆರಿಕದಲ್ಲಿ ರಜೆ ಕಳೆಯುತ್ತಿದ್ದು, ಇತ್ತೀಚೆಗೆ, ಮಾಹಿ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ವಿಡಿಯೋದಲ್ಲಿ ಧೋನಿ ಯುಎಸ್ ಓಪನ್ 2023 ಪಂದ್ಯ ವೀಕ್ಷಿಸಲು ಬಂದಿರುವುದನ್ನು ಕಾಣಬಹುದು. ಏತನ್ಮಧ್ಯೆ, ಧೋನಿ ಅಮೆರಿಕದಲ್ಲಿರುವ ಬಗ್ಗೆ ಭಾರತೀಯ ಅಭಿಮಾನಿಗಳಿಗೆ ತಿಳಿದು, ಅವರನ್ನು ನೋಡಲು ಬಂದಾಗ ವಿದೇಶಿ ನೆಲದಲ್ಲಿ ಮಹಿ ತಮ್ಮ ಅಭಿಮಾನಿಗಳನ್ನು ನಿರಾಶೆಗೊಳಿಸಲಿಲ್ಲ. ಫೋಟೋ ಜೊತೆಗೆ ಆಟೋಗ್ರಾಫ್ ನೀಡುವುದನ್ನು ಮರೆಯಲಿಲ್ಲ.

ಅಮೆರಿಕದಲ್ಲಿ ಅಭಿಮಾನಿಗಳನ್ನು ಭೇಟಿಯಾದ ಮಹಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ಎಂಎಸ್ ಧೋನಿ ತಮ್ಮ ಅಭಿಮಾನಿಯೊಬ್ಬರಿಗೆ ಆಟೋಗ್ರಾಫ್ ನೀಡುತ್ತಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ಮಹಿ ಭೇಟಿಯ ಆಸೆ ಈಡೇರಿದ ಖುಷಿ ಅಭಿಮಾನಿಯ ಮುಖದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಅಭಿಮಾನಿಗೆ ಆಟೋಗ್ರಾಫ್ ನೀಡಿದ ನಂತರ, ಧೋನಿ ಅವರ ಚಾಕೊಲೇಟ್ ಅನ್ನು ತಮಾಷೆಯಾಗಿ ಕೇಳುವುದನ್ನು ಸಹ ನೋಡಬಹುದು. ಕೊನೆಗೆ ಆಟೋಗ್ರಾಫ್ ನೀಡಿದ ಮಹಿ ತಮ್ಮ ಅಭಿಮಾನಿಗಳೊಂದಿಗೆ ಫೋಟೋಗೆ ಪೋಸ್ ನೀಡಿದರು.

ಯುಎಸ್ ಓಪನ್​​​​​ನಲ್ಲಿ ಕಾಣಿಸಿಕೊಂಡಿದ್ದ ಧೋನಿ

ಕಾರ್ಲೋಸ್ ಅಲ್ಕರಾಜ್ ಮತ್ತು ಅಲೆಕ್ಸಾಂಡರ್ ನಡುವೆ ನಡೆದ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಲು ತೆರಳಿರುವ ಮಹಿ ಸಭಿಕರ ನಡುವೆ ಕುಳಿತಿರುವ ವಿಡಿಯೋ ಇತ್ತೀಚೆಗೆ ಸಖತ್ ಸುದ್ದಿ ಮಾಡಿತ್ತು. ಧೋನಿ ಟೆನಿಸ್‌ನ ದೊಡ್ಡ ಅಭಿಮಾನಿ. ಹಾಗಾಗಿ ಅವಕಾಶ ಸಿಕ್ಕಾಗಲೆಲ್ಲಾ ಪಂದ್ಯವನ್ನು ವೀಕ್ಷಿಸಲು ತೆರಳುತ್ತಾರೆ.

ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಧೋನಿ

ಐಪಿಎಲ್ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಚಾಂಪಿಯನ್ ಮಾಡಿದ ನಂತರ, ಎಂಎಸ್ ಧೋನಿ ತಮ್ಮ ಎಡಗಾಲಿನ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಐಪಿಎಲ್ 2024 ರಲ್ಲಿ ಅಭಿಮಾನಿಗಳಿಗಾಗಿ ಮತ್ತೊಮ್ಮೆ ಆಡುವುದನ್ನು ನೋಡಬಹುದು ಎಂದು ಧೋನಿ ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net