

ಏ.12 ರಂದು ಟಿಇಟಿ ನಡೆಸಲು ಇಲಾಖೆ ನಿರ್ಧರಿಸಿತ್ತು. ಅದೇ ದಿನ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ನಿಗದಿಯಾಗಿರುವುದು ಸಾವಿರಾರು ಅಭ್ಯರ್ಥಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಈ ಕುರಿತು ವಿಜಯವಾಣಿ ಸೋಮವಾರ ವಿಶೇಷ ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿರುವ ಸಚಿವರು ಒಂದು ದಿನ ಮುಂಚಿತವಾಗಿ ಟಿಇಟಿ ನಡೆಸಲು ಕ್ರಮ ಕೈಗೊಂಡಿದ್ದಾರೆ.