ನಾಲ್ವರು ಡಿವೈಎಸ್​ಪಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ...

DDYYSP 16 March 20
Published on

ಬೆಂಗಳೂರು: ನಾಲ್ವರು ಡಿವೈಎಸ್​ಪಿ (ಡೆಪ್ಯೂಟಿ ಸೂಪರಿಟೆಂಡೆಂಟ್​ ಆಫ್​ ಪೊಲೀಸ್​) ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸಿಐಡಿ ಡಿವೈಎಸ್​ಪಿಗಳಾಗಿದ್ದ ವಿ.ಗೋವಿಂದರಾಜು ಅವರನ್ನು ಹುಬ್ಬಳ್ಳಿ-ಧಾರವಾಡ ನಗರದ ಹುಬ್ಬಳ್ಳಿ ಉತ್ತರ ವಿಭಾಗಕ್ಕೆ ಮತ್ತು ಅನುಷಾ ಅವರನ್ನು ಹಬ್ಬಳ್ಳಿ-ಧಾರವಾಡ ನಗರದ ಧಾರವಾಡ ನಗರ ಉಪವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ಹಾಗೇ ರಾಜ್ಯ ಗುಪ್ತವಾರ್ತೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿವೈಎಸ್​ಪಿಗಳಾದ ವಿನಾಯಕ ಎನ್​. ಶೆಟ್ಟಿಗೇರ್​ ಅವರನ್ನು ಶಿವಮೊಗ್ಗ ಜಿಲ್ಲೆಯ ಸಾಗರ ಉಪವಿಭಾಗಕ್ಕೆ ಮತ್ತು ಶಿವಾನಂದ ಎನ್​. ಮದರಖಂಡಿಯವರನ್ನು ಶಿಕಾರಿಪುರ ಉಪವಿಭಾಗಕ್ಕೆ ಟ್ರಾನ್ಸ್​ಫರ್ ಮಾಡಿ ರಾಜ್ಯ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರ ಕಚೇರಿ ಆದೇಶ ಹೊರಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net