ಯುಪಿಎಸ್​ಸಿಯಿಂದ ಪರೀಕ್ಷೆ ಮುಂದೂಡಿಕೆ

UPSC
Published on

ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್​ಸಿ) ವಿವಿಧ ಪರೀಕ್ಷೆ, ನೇರ ನೇಮಕಾತಿ ಹಾಗೂ ಅಧಿಸೂಚನೆ ಹೊರಡಿಸುವುದನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ.

ನ್ಯಾಷನಲ್​ ಡಿಫೆನ್ಸ್​ ಅಕಾಡೆಮಿ ಹಾಗೂ ನವಲ್​ ಅಕಾಡೆಮಿಗೆ ಆಯ್ಕೆಗಾಗಿ ಜನವರಿ 8ರಮದು ಅಧಿಸೂಚನೆ ಹೊರಡಿಸಲಾಗಿದ್ದು, ಏಪ್ರಿಲ್​ 19ರ ಭಾನುವಾರ ಮೊದಲ ಹಂತದ ಪರೀಕ್ಷೆ ನಡೆಯಬೇಕಿತ್ತು. ಆದರೆ, ದೇಶಾದ್ಯಂತ ಲಾಕ್​ಡೌನ್​ ಹಿನ್ನೆಲೆಯಲ್ಲಿ ಈ ಪರೀಕ್ಷೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ.

ಇದಲ್ಲದೇ, ಭಾರತೀಯ ಅರ್ಥಶಾಸ್ತ್ರ ಸೇವೆ ( ಐಇಎಸ್​), ಭಾರತೀಯ ಲೆಕ್ಕಶಾಸ್ತ್ರ ಸೇವೆ (ಐಎಸ್​ಎಸ್​) ಅಧಿಸೂಚನೆ ಹೊರಡಿಸುವುದನ್ನು ಈಗಾಗಲೇ ಮುಂದೂಡಿದೆ. ಜತೆಗೆ, ಹಲವು ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಬೇಕಿದ್ದ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ.

ಪ್ರಸ್ತುತ ಅಖಿಲ ಭಾರತ ನಾಗರಿಕ ಸೇವೆಯ ವಿವಿಧ ಹುದ್ದೆಗಳಿಗೆ ಸಂದರ್ಶನ ನಡೆಸಲಾಗುತ್ತಿತ್ತು. ಮಾರ್ಚ್​ 23ರ ನಂತರ ನಡೆಯಬೇಕಿದ್ದ ಎಲ್ಲ ಸಂದರ್ಶನ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಿ ಈಗಾಗಲೇ ಸುತ್ತೋಲೆ ಪ್ರಕಟಿಸಿದೆ.
ನಿಗದಿತ ವೇಳಾಪಟ್ಟಿಯಂತೆ ಏಪ್ರಿಲ್​ 8ರಂದು ಕಂಬೈನ್ಡ್​ ಮೆಡಿಕಲ್​ ಸರ್ವೀಸ್​ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಬೇಕಿದೆ ಆದರೆ, ಇದನ್ನು ಮುಂದೂಡುವ ಸಾಧ್ಯತೆಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net