

ಆಂಧ್ರಪ್ರದೇಶ: ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ, ನಟಿ ವೈಷ್ಣವಿ ಚೈತನ್ಯ ಮುಖ್ಯಭೂಮಿಕೆಯಲ್ಲಿ ನಟಿಸಿದ 'ಬೇಬಿ' ಸಿನಿಮಾ ಜುಲೈ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಇಂದು ಬ್ಲಾಕ್ಬಸ್ಟರ್ ಹಿಟ್ ಆಗಿ ಹೊರಹೊಮ್ಮಿದೆ. ಸದ್ಯ ಈ ಚಿತ್ರ ಇದೀಗ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದ್ದು, ಆಗಸ್ಟ್ 25 ರಂದು ತೆರೆ ಕಾಣಲಿದೆ.
ವರದಿಯ ಪ್ರಕಾರ 'ಬೇಬಿ' 90 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದೆ. ಅತೀ ಮುಖ್ಯವಾಗಿ ಈ ಚಿತ್ರ ಯಾವುದೇ ಸ್ಟಾರ್ ನಟರಿಲ್ಲದೇ ಯಶಸ್ವಿಯಾಗಿರುವುದು ಇದೀಗ ಸಿನಿಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರದ ಡಿಜಿಟಲ್ ಪಾಲುದಾರ ಆಹಾ ಚಿತ್ರದ ಒಟಿಟಿ ರಿಲೀಸ್ ಇದೇ ಆಗಸ್ಟ್ 25 ರಿಂದ ಸ್ಟ್ರೀಮಿಂಗ್ ಆಗಲಿದೆ ಎಂದು ಘೋಷಿಸಿದೆ.
ಕೇವಲ ತೆಲುಗು ಭಾಷೆಯಲ್ಲಿ ಮಾತ್ರ ಬಿಡುಗಡೆಗೊಂಡಿರುವ ಚಿತ್ರ ಬೇರೆ ಭಾಷೆಗಳಲ್ಲಿ ಬರಲಿದೆಯೋ? ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಚಿತ್ರದಲ್ಲಿ ವಿರಾಜ್, ನಾಗ ಬಾಬು, ಲಿರಿಶಾ, ಕುಸುಮಾ ದೇಗಲಮರ್ರಿ, ಸಾತ್ವಿಕ್ ಆನಂದ್, ಬಬ್ಲೂ, ಸೀತಾ, ಮೌನಿಕಾ ಮತ್ತು ಕೀರ್ತನಾ ಸೇರಿದಂತೆ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).