ಪ್ರಜ್ವಲ್ ದೇವರಾಜ್-ಶ್ರುತಿ ಹರಿಹರನ್​ ಸಿನಿಮಾದಲ್ಲಿ ತೆಲುಗು ನಟ ಸುನೀಲ್

Sandalwood
Published on

ಬೆಂಗಳೂರು: ಪ್ರಜ್ವಲ್​ ದೇವರಾಜ್​-ಶ್ರುತಿ ಹರಿಹರನ್​ ಜೋಡಿಯಾಗಿ ನಟಿಸುತ್ತಿರುವ ಹೆಸರಿಡದ ಚಿತ್ರಕ್ಕೆ ತೆಲುಗು ಚಿತ್ರರಂಗದ ಖ್ಯಾತ ನಟನ ಆಗಮನವಾಗಿದೆ. ಖ್ಯಾತ ನೃತ್ಯ ನಿರ್ದೇಶಕ ರಾಜಾ ಕಲೈ ಕುಮಾರ್ ನಿರ್ದೇಶನದ ಚೊಚ್ಚಲ ಚಿತ್ರಕ್ಕೆ ತೆಲುಗು ನಟನ ಆಗಮನದಿಂದ ಸಿನಿಮಾ ಮೇಲಿನ ಕ್ರೇಜ್​ಅನ್ನು ಮತ್ತಷ್ಟು ಹೆಚ್ಚಿಸಿದೆ.

ತೆಲುಗು ಚಿತ್ರರಂಗದ ಹೆಸರಾಂತ ನಟ ಸುನೀಲ್​ ಅವರು ಪ್ರಜ್ವಲ್​ ದೇವರಾಜ್​ ಹಾಗೂ ಶ್ರುತಿ ಹರಿಹರನ್​ ನಟನೆಯ ಇನ್ನೂ ಹೆಸರಿಡದ ಈ ಸಿನಿಮಾ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈಚೆಗಷ್ಟೇ ತೆರೆಕಂಡ ಜೈಲರ್ ಸಿನಿಮಾದಲ್ಲಿ ಬ್ಲಾಸ್ಟ್ ಮೋಹನ್ ಅನ್ನೋ ಕ್ಯಾರೆಕ್ಟರ್ ಮಾಡಿದ್ದ ಸುನೀಲ್‌ಗೆ ಭಾರಿ ಮೆಚ್ಚುಗೆ ಸಿಕ್ಕಿತ್ತು. 

180 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಸುನಿಲ್, ಪ್ರಸ್ತುತ ಜೈಲರ್‌ನಲ್ಲಿನ ಪಾತ್ರಕ್ಕಾಗಿ ಗಮನ ಸೆಳೆದಿದ್ದಾರೆ, ವಿಜಯ್ ಕಾರ್ತಿಕೇಯ ನಿರ್ದೇಶನದ ಸುದೀಪ್ ಅವರ ಬಹುಭಾಷಾ ಚಿತ್ರ ಮ್ಯಾಕ್ಸ್‌ ನಲ್ಲಿಯೂ ಅಭಿನಯಿಸುತ್ತಿದ್ದಾರೆ. ಪೋಷಕ ಹಾಗೂ ವಿಲನ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ನಟ ಸುನೀಲ್ ನಟನೆಯ ಮಾವೀರನ್​ ಹಾಗೂ ಮಾರ್ಕ್​ ಆ್ಯಂಟನಿ ಚಿತ್ರಗಳು ಇತ್ತೀಚಿಗೆ ತೆರೆಕಂಡು ಬಾಕ್ಸ್​ಆಫೀಸ್​ನಲ್ಲಿ ಸದ್ದು ಮಾಡಿದ್ದವು.

ನೃತ್ಯ ನಿರ್ದೇಶಕ ರಾಜ ಕಲೈ ಕುಮಾರ್ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ಪ್ರಜ್ವಲ್‌ಗೆ ನಾಯಕಿಯಾಗಿ ಶ್ರುತಿ ಹರಿಹರನ್ ಕಾಣಿಸಿಕೊಳ್ಳಲಿದ್ದಾರೆ. ರಾಜಲಕ್ಷ್ಮೀ ಎಂಟರ್‌ಟೇನ್‌ಮೆಂಟ್‌ ಬ್ಯಾನರ್ ಅಡಿಯಲ್ಲಿ ಪ್ರತಿಭಾ ನರೇಶ್ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ, ಚಿತ್ರತಂಡ ಶೂಟಿಂಗ್ ಸ್ಥಳಗಳನ್ನು ಅಂತಿಮಗೊಳಿಸುತ್ತಿದ್ದು, ಸಂಪೂರ್ಣ ಶೂಟಿಂಗ್ ಒಂದೇ ಸ್ಟ್ರೆಚ್‌ನಲ್ಲಿ ನಡೆಯಲಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net