ರೈತರಿಗೆ ಬಂಪರ್ ಗಿಫ್ಟ್​ ಕೊಟ್ಟ ಕಾಂಗ್ರೆಸ್​ ಸರ್ಕಾರ; 2 ಲಕ್ಷ ರೂ. ವರೆಗಿನ ಸಾಲ ಮನ್ನಾ

farmer
Published on

ಹೈದರಾಬಾದ್: 2023ರ ವರ್ಷಾಂತ್ಯದಲ್ಲಿ ನಡೆದ ತೆಲಂಗಾಣ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಘೋಷಣೆಗಳನ್ನು ಮಾಡಿ ಅಧಿಕಾರಕ್ಕೇರಿದ್ದ ಕಾಂಗ್ರೆಸ್​ ಪಕ್ಷವು ಇದೀಗ ರೈತರಿಗೆ ಸಿಹಿಸುದ್ದಿಯನ್ನು ನೀಡಿದೆ. 2 ಲಕ್ಷ ರೂಪಾಯಿ ವರೆಗಿನ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಅಲ್ಲಿನ ಸರ್ಕಾರ ಘೋಷಿಸಿದ್ದು, ರೈತರಿಗಾಗಿ ಭೀಮಾಫಸಲ್ ಯೋಜನೆ ಜಾರಿ ಮಾಡುವುದಾಗಿ ತಿಳಿಸಿದೆ.

ತೆಲಂಗಾಣ ಸರ್ಕಾರವು ಇಂದು (ಜುಲೈ 26) ಮಂಡಿಸಿದ 2.91 ಲಕ್ಷ ಕೋಟಿ ರೂಪಾಯಿ ಗಾತ್ರದ ಆಯವ್ಯಯದಲ್ಲಿ ಈ ಬಗ್ಗೆ ತಿಳಿಸಲಾಗಿದ್ದು, ಮಹಿಳಾ ಸ್ವಸಹಾಯ ಸಂಘದಲ್ಲಿರುವ ಮಹಿಳೆಯರಿಗೆ ಇಂದಿರಾ ಮಹಿಳಾ ಯೋಜನೆ ಮೂಲಕ 1 ಲಕ್ಷ ಆರ್ಥಿಕ ನೆರವು ನೀಡುವುದಾಗಿ ಡಿಸಿಎಂ, ಆರ್ಥಿಕ ಸಚಿವ ಮಲ್ಲು ಭಟ್ಟಿ ವಿಕ್ರಮ ಘೋಷಿಸಿದ್ದಾರೆ.

ಗ್ಯಾರಂಟಿ ಸ್ಕೀಂಗಳ ಜೊತೆಗೆ ಸರ್ಕಾರ ವಿವಿಧ ಯೋಜನೆಗಳಿಗೆ 34,579 ಕೋಟಿ ರೂಗಳನ್ನು ರಾಜ್ಯ ಸರ್ಕಾರ ವ್ಯಯಿಸುತ್ತಿದ್ದು, ಜನರ ಕಲ್ಯಾಣ ಕಡೆಗಣಿಸಿಲ್ಲ. ಸಾಧ್ಯವಾಗುವ ತನಕ ಎಲ್ಲವೂ ಅಸ್ಯಾಧ್ಯವೆ ಎಂದು ನೆಲ್ಸನ್​ ಮಂಡೇಲಾ ಅವರ ಹೇಳಿಕೆಯನ್ನು ವಿತ್ತ ಸಚಿವರು ತಮ್ಮ ಬಜೆಟ್​ ಭಾಷಣದ ವೇಳೆ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net