

ನವದೆಹಲಿ: ತೆಲಂಗಾಣ ಚುಮಾವಣೆ ಮುಗಿಯುತ್ತಿದ್ದಂತೆ ಎಕ್ಸಿಟ್ ಪೋಲ್ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ ತನ್ನ ಪ್ರತಿಸ್ಪರ್ಧಿ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಗಿಂತ ಸ್ಪಷ್ಟವಾದ ಮುನ್ನಡೆ ಸೂಚಿಸುತ್ತಿದೆ. ಆದರೆ ಬಹುಮತ ಸಿಗುವುದು ಖಚಿತ ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ (ಕೆಸಿಆರ್) ನೇತೃತ್ವದ ಬಿಆರ್‌ಎಸ್ ಹೇಳುತ್ತಿದೆ. ಸರ್ಕಾರದ ವಿರೋಧಿ ಅಲೆ ತಮಗೆ ಅನುಕೂಲಕರವಾಗಿದೆ ಎಂದು ಕಾಂಗ್ರೆಸ್, ಬಿಜೆಪಿ ಭಾವಿಸುತ್ತಿವೆ. ಯಾವ ಪಕ್ಷ ಮುನ್ನಡೆ ಸಾಧಿಸುತ್ತದೆ ಎಂಬುದರ ಕುರಿತು ವಿವಿಧ ಮಾಧ್ಯಮ ಸಂಸ್ಥೆಗಳು ನೀಡಿರುವ ಮತಗಟ್ಟೆ ಸಮೀಕ್ಷೆ ಹೀಗಿದೆ..
* ಇಂಡಿಯಾ ಟಿವಿ-ಸಿಎನ್‌ಎಕ್ಸ್ ಎಕ್ಸಿಟ್ ಪೋಲ್‌ಗಳ ಪ್ರಕಾರ 119 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 63-79 ಸ್ಥಾನಗಳನ್ನು ಗೆಲ್ಲಬಹುದು, ಆದರೆ ಬಿಆರ್‌ಎಸ್ 31-47 ಸ್ಥಾನಗಳನ್ನು ಗೆಲ್ಲುತ್ತದೆ.
* ಜನ್ ಕಿ ಬಾತ್‌ನ ಎಕ್ಸಿಟ್ ಪೋಲ್ ಪ್ರಕಾರ ಕಾಂಗ್ರೆಸ್ 48-64, ಬಿಆರ್‌ಎಸ್ 40-55 ಮತ್ತು ಬಿಜೆಪಿ 7-13 ಸ್ಥಾನಗಳನ್ನು ಪಡೆಯಬಹುದು.
* ಟಿವಿ9 ಭಾರತ್ ವರ್ಷ್-ಪೋಲ್‌ಸ್ಟ್ರಾಟ್ ಸಮೀಕ್ಷೆ ಕಾಂಗ್ರೆಸ್ ಮತ್ತು ಬಿಆರ್‌ಎಸ್‌ಗೆ ಕ್ರಮವಾಗಿ 49-59 ಮತ್ತು 48-58 ಸ್ಥಾನ ಬರುತ್ತವೆ ಎಂದು ತೋರಿಸಿದೆ. ರಿಪಬ್ಲಿಕ್ ಟಿವಿ-ಮ್ಯಾಟ್ರಿಜ್ ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್ 58-68 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ತೋರಿಸಿದರೆ, ಬಿಆರ್‌ಎಸ್ ಕನಿಷ್ಠ 46-56 ಸ್ಥಾನಗಳನ್ನು ಪಡೆಯುತ್ತದೆ ಎಂದು ಮುನ್ಸೂಚನೆ ನೀಡಿದೆ.
ಕಾಂಗ್ರೆಸ್, ಕೆಸಿಆರ್ ಅವರ ಬಿಆರ್‌ಎಸ್ ಮತ್ತು ಬಿಜೆಪಿ ಸ್ಪರ್ಧಿಸಿರುವ ಪ್ರಮುಖ ಪಕ್ಷಗಳು. ಸಂಜೆ 5ಗಂಟೆ ತನಕ ಶೇ.63 ಮತದಾನ ದಾಖಲಾಗಿದೆ. ಸೀಟು ಹಂಚಿಕೆ ಒಪ್ಪಂದದ ಪ್ರಕಾರ ಬಿಜೆಪಿ ಮತ್ತು ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನೆ ಕ್ರಮವಾಗಿ 111 ಮತ್ತು 8 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, ಕಾಂಗ್ರೆಸ್ ತನ್ನ ಮಿತ್ರಪಕ್ಷವಾದ ಸಿಪಿಐಗೆ ಒಂದು ಸ್ಥಾನವನ್ನು ನೀಡಿದ್ದು, 118 ಕಡೆ ಸ್ಪರ್ಧಿಸಿದೆ. ವೈಎಸ್ಆರ್ ಪಕ್ಷ ಕಾಂಗ್ರೆಸ್ ಬೆಂಬಲಿಸಿ ಕಣಕ್ಕೆ ಅಭ್ಯರ್ಥಿಗಳನ್ನು ಇಳಿಸಿಲ್ಲ. ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಒಂಬತ್ತು ವಿಭಾಗಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ತೆಲಂಗಾಣ ಚುನಾವಣೆ ಎಕ್ಸಿಟ್ ಪೋಲ್ಸ್
ಮಾಧ್ಯಮ ಸಂಸ್ಥೆ ಕಾಂಗ್ರೆಸ್ ಬಿಆರ್‌ಎಸ್ ಬಿಜೆಪಿ ಎಂಐಎಂ ಇತರರು
ಸಿಎನ್ಎನ್ 56 48 10 5 -
ಸಿ ಪ್ಯಾಕ್ 65 41 4 - 9
ಆರಾ ಮಸ್ತಾನ್ ಸರ್ವೇ 58-67 41-49 5-7 - 7-9
ಪಲ್ಸ್ ಟುಡೆ 69-71 37-38 3-5 - 1
ಚಾಣಕ್ಯ ಸ್ಟ್ರಾಟಜೀಸ್ 67-78 22-30 6-9 6-7 -
ನ್ಯೂಸ್ 18 ಸರ್ವೇ 48 56 - 5 -
ಥರ್ಡ್ ವಿಜನ್ ಸರ್ವೇ 60-68 33-40 1-4 5-7 1
ಪೋಲ್ ಟ್ರೆಂಡ್ಸ್ 65-68 35-40 7-10 6-9 -
ಪೊಲಿಟಿಕಲ್ ಗ್ರಾಫ್ 68 38 5 7 1
ಜನಂಸಾಕ್ಷಿ 66-77 26-37 4-9 - 1
ಪಾರ್ಥದಾನ್ ಸರ್ವೇ 68 40 4 6 1 ಆತ್ಮಸಾಕ್ಷಿ 48-51 58-63 7-8 6-7 1-2
ಪೋಲ್ ಸ್ಟಾಟ್ 49-59 48-58 5-10 6-8 -
ರಾಷ್ಟ್ರ 56 45 10 - 8