ತೇಜಸ್ವಿ ಈಗಲೇ ಸಿಎಂ ಆಗುವುದು ಬೇಡ, ವಯಸ್ಸಾದ ಮೇಲೆ ಆಗಲಿ: ಉಮಾ ಭಾರತಿ

ಉಮಅ
Published on

ನವದೆಹಲಿ: ಬಿಹಾರ ಚುನಾವಣೆಯಲ್ಲಿ ಸೋಲುಂಡಿರುವ ತೇಜಸ್ವಿ ಯಾದವ್​ ಅವರ ಬಗ್ಗೆ ಬಿಜೆಪಿ ನಾಯಕಿ ಉಮಾ ಭಾರತಿ ಮಾತನ್ನಾಡಿದ್ದಾರೆ. ತೇಜಸ್ವಿ ಒಳ್ಳೆ ಹುಡುಗ, ಆದರೆ ಈಗಲೇ ನಾಯಕನಾಗುವುದು ಬೇಡ ಎಂದು ಅವರು ಹೇಳಿದ್ದಾರೆ.

ತೇಜಸ್ವಿ ಯಾದವ್​ ತುಂಬಾ ಒಳ್ಳೆ ಹುಡುಗ. ಈ ಚುನಾವಣೆಯಲ್ಲಿ ಜನರು ಕೂದಲೆಳೆ ಅಂಚಿನಲ್ಲಿ ಆತನ ನಾಯಕತ್ವದಿಂದ ಪಾರಾಗಿದ್ದಾರೆ. ಇಲ್ಲವಾಗಿದ್ದರೆ ಮತ್ತೊಮ್ಮೆ ಲಾಲೂ ಪ್ರಸಾದ್ ಯಾದವ್​ ಅವರ ಜಂಗಲ್​ ರಾಜ್​ ಸರ್ಕಾರ ಅಧಿಕಾರಕ್ಕೆ ಬಂದುಬಿಡುತ್ತಿತ್ತು. ತೇಜಸ್ವಿ ಮುಖ್ಯಮಂತ್ರಿಯಾಗಬೇಕು, ಆದರೆ ಈಗಲ್ಲ. ಈಗಿನ್ನೂ ಯುವಕರಾಗಿರುವ ತೇಜಸ್ವಿ ವಯಸ್ಸಾದ ಮೇಲೆ ಸಿಎಂ ಅದರೆ ಒಳ್ಳೆಯದು ಎಂದು ಅವರು ನುಡಿದಿದ್ದಾರೆ.

ಇದರ ಜತೆಯಲ್ಲಿ ಕಾಂಗ್ರೆಸ್​ನ ಕಮಲನಾಥ ಅವರನ್ನೂ ಉಮಾಭಾರತಿ ಕೊಂಡಾಡಿದ್ದಾರೆ. 'ಕಮಲನಾಥ ಜೀ ಅವರು ಒಳ್ಳೆ ರೀತಿಯಲ್ಲಿ ಚುನಾವಣೆಯಲ್ಲಿ ಹೋರಾಡಿದ್ದಾರೆ. ಅವರು ತುಂಬಾ ಸಭ್ಯ ವ್ಯಕ್ತಿ, ನನ್ನ ಅಣ್ಣನಿದ್ದಂತೆ.' ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net