

ಕೋಲ್ಕತ್ತ: ತನ್ನೊಂದಿಗೆ ಅನುಚಿತವಾಗಿ ವರ್ತಿಸಿ, ಅಶ್ಲೀಲ ಸನ್ನೆ ಮಾಡಿದವನಿಗೆ ಈ ರಂಗಭೂಮಿ ಕಲಾವಿದೆ ತಕ್ಕ ಶಾಸ್ತಿ ಮಾಡಿದ್ದಾಳೆ. ಕಾಮುಕನನ್ನು ಅಟ್ಟಿಸಿಕೊಂಡು ಹೋಗಿದ್ದಲ್ಲದೆ, ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾಳೆ.
19 ವರ್ಷದ ಯುವತಿ ಪಶ್ಚಿಮಬಂಗಾಳದ ಕಾಳಿಬಾರಿ ನಿವಾಸಿ. ರಂಗಭೂಮಿ ಕಲಾವಿದೆಯಾದ ಇವಳು ನಿನ್ನೆ ರಾತ್ರಿ ಸುಮಾರು 9.45 ರ ಹೊತ್ತಿಗೆ ನಾಟಕ ಅಭ್ಯಾಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಳು. ಆಗ ಆಕೆಗೆ ಎದುರಾದ 40 ವರ್ಷದ ಅಮಿಯಾ ದಾಸ್ ಎಂಬಾತ ಅನುಚಿತವಾಗಿ ವರ್ತಿಸಿದ. ಅಶ್ಲೀಲ ಸನ್ನೆ ಮಾಡಿದ್ದಲ್ಲದೆ, ಬಂದು ಯುವತಿಯ ಗುಪ್ತಾಂಗಕ್ಕೆ ಅಸಭ್ಯವಾಗಿ ಕೈ ಹಾಕಿ, ಕೂಡಲೇ ಓಡಿದ್ದಾನೆ. ಇದೆಲ್ಲ ನಡೆದದ್ದು ಅಶೋಕನಗರದ ಚೌರಿಂಗೀ ಎಂಬಲ್ಲಿ. ಇದನ್ನೂ ಓದಿ: VIDEO: ಯೋಗ ಮಾಡುತ್ತ ಆನೆ ಮೇಲಿಂದ ಬಿದ್ದ ಬಾಬಾ ರಾಮದೇವ್!
ಆತ ನನ್ನ ಬಳಿ ಬಂದು ನನ್ನ ಖಾಸಗಿ ಅಂಗಕ್ಕೆ ಕೈ ಹಾಕಿದ. ನಂತರ ಬ್ಯಾಗ್ ಕಿತ್ತುಕೊಳ್ಳಲು ನೋಡಿದ. ನನಗೆ ಒಂದು ಬಾರಿ ಶಾಕ್ ಆಯಿತು. ಓಡುತ್ತಿದ್ದ ಅವನನ್ನು ಬೆನ್ನಟ್ಟಿ ಹೋದೆ. ಕೊನೆಗೂ ಹಿಡಿದೆ. ಆತ ನನ್ನೊಂದಿಗೆ ಜಗಳಕ್ಕೆ, ಹೊಡೆದಾಟಕ್ಕೆ ನಿಂತ. ನಾನೂ ಅವನಿಗೆ ಹೊಡೆದೆ...ನಂತರ ಪೊಲೀಸರಿಗೆ ಕರೆ ಮಾಡಿದೆ ಎಂದು ಆ ಯುವತಿ ತಿಳಿಸಿದ್ದಾಳೆ.
ಅಷ್ಟರಲ್ಲಿ ಸ್ಥಳೀಯರು ಅಲ್ಲಿಗೆ ಆಗಮಿಸಿದರು. ಆರೋಪಿಯನ್ನು ಹಿಡಿದು, ಥಳಿಸಿದರು. ಅಷ್ಟರಲ್ಲಿ ಪೊಲೀಸರು ಬಂದು ಅವನನ್ನು ಬಂಧಿಸಿಕೊಂಡು ಹೋದರು ಎಂದು ಹೇಳಿದ್ದಾಳೆ. (ಏಜೆನ್ಸೀಸ್)