

ಪುಣೆ: ಇಎಂಐ ಕಟ್ಟಲು ಪ್ರಿಯಕರ ನಿರಾಕರಿಸಿದ್ದಕ್ಕೆ ಮನನೊಂದು ಯುವ ಟೆಕ್ಕಿಯೊಬ್ಬಳು ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಮೃತ ಟೆಕ್ಕಿಯನ್ನು ರಸಿಕಾ ರವೀಂದ್ರ ದಿವಟೆ (25) ಎಂದು ಗುರುತಿಸಲಾಗಿದೆ. ಈಕೆ ಪುಣೆಯ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಕಳೆದ 8 ತಿಂಗಳಿಂದ ರಸಿಕಾ ಮತ್ತು ಆಕೆಯ ಬಾಯ್ಫ್ರೆಂಡ್ ಆದರ್ಶ್ ಅಜಯ್ ಕುಮಾರ್ ಮೆನನ್ ಪ್ರೀತಿಸುತ್ತಿದ್ದರು. ಇಬ್ಬರು ಒಂದೇ ಕಂಪನಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು.
ತನ್ನ ಪ್ರಿಯಕರನಿಗಾಗಿ ಸಾಲ ಮಾಡಿ ಏಪ್ರಿಲ್‌ನಲ್ಲಿ ಕಾರು ಖರೀದಿಸಿದ್ದಳು. ಯುವತಿಯೇ ಡೌನ್ ಪೇಮೆಂಟ್ ಮೊತ್ತವನ್ನು ಪಾವತಿಸಿದ್ದಾಳೆ. ಇಎಂಐ ಪಾವತಿಸುವುದಾಗಿ ಆದರ್ಶ್ ಭರವಸೆ ನೀಡಿದ್ದನಂತೆ. ಆಕೆಯ ಕ್ರೆಡಿಟ್ ಕಾರ್ಡ್‌ನಿಂದ ಒಟ್ಟು 3 ಲಕ್ಷ ರೂಪಾಯಿ ಸಾಲ ತೆಗೆದುಕೊಳ್ಳಲಾಗಿದೆ. 2.75 ಲಕ್ಷ ರೂ. ವೈಯಕ್ತಿಕ ಸಾಲವನ್ನೂ ತೆಗೆದುಕೊಳ್ಳಲಾಗಿದೆ. ಸಾಲದ ಆ್ಯಪ್ ಮೂಲಕ ಸಾಲವನ್ನೂ ಪಡೆದಿದ್ದಳು.
ಆದರೆ, ಇಎಂಐ ಪಾವತಿಸಲು ವಿಫಲವಾದಾಗ ಒತ್ತಡಕ್ಕೆ ಒಳಗಾಗಿದ್ದಳು ಎಂದು ಆಕೆಯ ತಾಯಿ ಹೇಳಿದ್ದಾರೆ. ಈ ಬಗ್ಗೆ ರಸಿಕಾ ಆದರ್ಶ್ ಜೊತೆ ಜಗಳವಾಡಿದ್ದಳು. ಆದರೆ, ಇಎಂಐ ಕಟ್ಟಲು ಮೆನನ್ ಮಾತ್ರ ಒಪ್ಪಲೇ ಇಲ್ಲ. ಇದರಿಂದ ಮನನೊಂದ ರಸಿಕಾ, ಮೆನನ್ ಫ್ಲಾಟ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ತಾಯಿ ದೂರಿನ ಮೇರೆಗೆ ಪೊಲೀಸರು ಆದರ್ಶ್‌ನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್)