VIDEO | ಕ್ಲಾಸ್​ರೂಮ್​​​​ನಲ್ಲಿ 'ಐಟಂ ಸಾಂಗ್​​​​'ಗೆ ಡ್ಯಾನ್ಸ್ ಮಾಡಿದ ಶಿಕ್ಷಕಿ: ನೆಟ್ಟಿಗರಿಂದ ಫುಲ್‌ ಕ್ಲಾಸ್..!

video
Published on

ನವದೆಹಲಿ: ಶಿಕ್ಷಕಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಆಗಿದಿಷ್ಟು..2005 ರಲ್ಲಿ ಬಿಡುಗಡೆಯಾದ ಅಮಿತಾಬ್ ಬಚ್ಚನ್ ನಟನೆಯ 'ಬಂಟಿ ಔರ್ ಬಬ್ಲಿ' ಸಿನಿಮಾದ 'ಕಜ್ರಾ ರೇ' ಹಾಡಿಗೆ ಶಿಕ್ಷಕಿ ತರಗತಿಯೊಳಗೆ ನೃತ್ಯ ಮಾಡಿದರು. ಆ ನಂತರ ಶಿಕ್ಷಕಿಯ ಡ್ಯಾನ್ಸ್ ಸೋಶಿಯಲ್ ಮೀಡಿಯಾ ಬಳಕೆದಾರರ ಹೃದಯಕ್ಕೆ ನೇರವಾಗಿ ಲಗ್ಗೆಯಿಟ್ಟಿತು.

ಅವರ ಇಬ್ಬರು ವಿದ್ಯಾರ್ಥಿಗಳು ಸಹ ಶಿಕ್ಷಕಿಯೊಂದಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಆದರೆ ಈ ವೈರಲ್ ವಿಡಿಯೋ ನೋಡಿ ಜನ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಾಕೆ ಅಂತೀರಾ?, ಇಲ್ಲಿದೆ ನೋಡಿ ಫುಲ್ ಸ್ಟೋರಿ...

ವಿಡಿಯೋ ನೋಡಿದರೆ ವಿದ್ಯಾರ್ಥಿಗಳು ತಮ್ಮ ಶಿಕ್ಷಕಿಯ ಹುಟ್ಟುಹಬ್ಬವನ್ನು ಶಾಲಾ ಕೊಠಡಿಯಲ್ಲಿ ಆಚರಿಸುತ್ತಿದ್ದಂತಿದೆ. "ಜನ್ಮದಿನದ ಶುಭಾಶಯಗಳು ರಶ್ಮಿ ಮೇಡಂ" ಎಂದು ಹಿಂದೆ ಹಸಿರು ಬೋರ್ಡ್ ಮೇಲೆ ಬರೆಯಲಾಗಿದೆ.

ಶಿಕ್ಷಕಿ ತನ್ನ ಹುಟ್ಟುಹಬ್ಬವನ್ನು ತುಂಬಾ ಆನಂದಿಸುತ್ತಿರುವಂತೆ ತೋರುತ್ತಿದೆ. ಅವರ ವಿದ್ಯಾರ್ಥಿಗಳು ಕೂಡ ಅವರನ್ನು ಸಪೋರ್ಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಈ ವಿಡಿಯೋವನ್ನು ಇದುವರೆಗೆ 80 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಶಿಕ್ಷಕಿ ನೃತ್ಯ ಮಾಡಲು ಪ್ರಾರಂಭಿಸಿದ ತಕ್ಷಣ, ಒಬ್ಬ ಹುಡುಗ ಆಕೆಯನ್ನು ಬೆಂಬಲಿಸಿ, ನಂತರ ಕೆಂಪು ಸ್ಕಾರ್ಫ್ ಅನ್ನು ಎಸೆಯುತ್ತಾನೆ.

ಇಲ್ಲಿದೆ ವಿಡಿಯೋ


@yeazlas ಹ್ಯಾಂಡಲ್‌ನೊಂದಿಗೆ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ವಿಡಿಯೋವನ್ನು ಹಂಚಿಕೊಳ್ಳುವಾಗ, ತರಗತಿಯೊಳಗೆ ಶಿಕ್ಷಕಿ ಮಕ್ಕಳೊಂದಿಗೆ ಐಟಂ ಹಾಡುಗಳಲ್ಲಿ ನೃತ್ಯ ಮಾಡುವ ಇಂತಹ ದಿನವನ್ನು ನಾವು ನೋಡಿರಲಿಲ್ಲ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ನೆಗೆಟಿವ್ ಕಾಮೆಂಟ್‌ಗಳ ಸುರಿಮಳೆ
ಈ ವಿಡಿಯೋಗೆ ಜನರು ಸಾಕಷ್ಟು ನೆಗೆಟಿವ್ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕಾಮೆಂಟ್ ಮಾಡುವಾಗ, ಬಳಕೆದಾರರು "ನೃತ್ಯ ಕೂಡ ಚೆನ್ನಾಗಿತ್ತು, ನಂತರ ಹುಡುಗ ಕೆಂಪು ಚುನಾರಿ ತೆಗೆದುಕೊಂಡು ಶಿಕ್ಷಕರ ಮೇಲೆ ಎಸೆದು, ನೃತ್ಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ದನು", "ಒಂದು ಕಾಲದಲ್ಲಿ ಶಾಲೆಗಳಲ್ಲಿ ಶಿಕ್ಷಕರು ಮಾದರಿಯಾಗಿದ್ದರು. ಆದರೆ ಇಂದು ಅವರೇ ಈ ರೀತಿ ಆಗಿದ್ದರೆ, ವಿದ್ಯಾರ್ಥಿಗಳೂ ಅವರ ಮಾತನ್ನು ಕೇಳುವುದು ಸಹಜ" ಎಂದೆಲ್ಲಾ ಕಾಮೆಂಟ್ ಮಾಡಿರುವುದನ್ನು ನಾವಿಲ್ಲಿ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net