VIDEO | ವಿದ್ಯಾರ್ಥಿನಿಗೆ ಕಿರುಕುಳ; ಶಿಕ್ಷಕನಿಗೆ ಥಳಿಸಿ, ಮುಖಕ್ಕೆ ಮಸಿ ಬಳಿದ ಕುಟುಂಬಸ್ಥರು

Untitled design - 2023-09-18T220005.671
Published on

ರಾಜಸ್ಥಾನ: ಶಾಲೆಯ ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಸರ್ಕಾರಿ ಶಾಲೆಯ ಶಿಕ್ಷಕನನ್ನು ಕುಟುಂಬಸ್ಥರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ರಾಜಸ್ಥಾನದ ಗಂಗಾನಗರದಲ್ಲಿ ವರದಿಯಾಗಿದೆ.

ತಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದ ಎಂದ ಆರೋಪಿಸಿದ ಪೋಷಕರು, ಶಿಕ್ಷಕನನ್ನು ಮನಬಂದಂತೆ ಥಳಿಸಿದ್ದಾರೆ. ಆತನ ಬಟ್ಟೆ ಹರಿಯುವಂತೆ ಹೊಡೆದ ಕುಟುಂಬಸ್ಥರು, ವ್ಯಕ್ತಿಯನ್ನು ಶಾಲೆಯಿಂದ ಹೊರಗೆ ಕರೆತಂದು ತಲೆ ಮತ್ತು ದೇಹದ ಮೇಲೆ ಕಪ್ಪು ಬಣ್ಣವನ್ನು ಸುರಿದು ಆಕ್ರೋಶ ಹೊರಹಾಕಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆದ ನಂತರ ವಿಷಯ ಬೆಳಕಿಗೆ ಬಂದಿದೆ. ತಮ್ಮ ಪುತ್ರಿಗೆ ಕಿರುಕುಳ ನೀಡಿದ್ದಾನೆ ಎಂದು ವಿದ್ಯಾರ್ಥಿನಿಯ ಕುಟುಂಬಸ್ಥರು ಪೊಲೀಸ್​ ಠಾಣೆಯಲ್ಲಿ ಶಿಕ್ಷಕ ರಾಜೇಶ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

"ಸರ್ಕಾರಿ ಶಿಕ್ಷಕನ ವಿರುದ್ಧ ಶನಿವಾರ ಪ್ರಕರಣ ರಿಜಿಸ್ಟರ್ ಆಗಿದ್ದು, ಭಾನುವಾರ ಶಿಕ್ಷಕ ಕ್ರಾಸ್ ಎಫ್‌ಐಆರ್ ದಾಖಲಿಸಿದ್ದಾರೆ. ಈಗ ವಿಷಯವನ್ನು ತನಿಖೆ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಯಾವುದೇ ಬಂಧನವಾಗಿಲ್ಲ" ಎಂದು ಅಧಿಕಾರಿಗಳು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net