ಮುಂಬೈ: ನಟ ಶಾರುಖ್ ಖಾನ್ ಅಭಿನಯದ ‘ಜವಾನ್’ ಸಿನಿಮಾ ಇದೀಗ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ 800 ಕೋಟಿ ರೂ. ಗಳಿಕೆಯನ್ನು ದಾಟುವ ಮೂಲಕ ಹೊಸ ದಾಖಲೆ ನಿರ್ಮಿಸುವಲ್ಲಿ ಮುಂಚೂಣಿಯಲ್ಲಿದೆ. ಸದ್ಯ ಇದೇ ಖುಷಿಯಲ್ಲಿ ಮಾತನಾಡಿರುವ ಚಿತ್ರದ ನಿರ್ದೇಶಕ, ನಮ್ಮ ಸಿನಿಮಾ ಆಸ್ಕರ್ ತಲುಪಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದ ಕರ್ನಾಟಕದ ಹೊಯ್ಸಳ ದೇವಾಲಯಗಳು
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಸಿನಿಮಾದ ಬಗ್ಗೆ ತಮ್ಮ ಮನದಾಳದ ಮಾತನ್ನು ಹಂಚಿಕೊಂಡ ನಿರ್ದೇಶಕ ಅಟ್ಲೀ ಕುಮಾರ್, “ಎಲ್ಲವೂ ಸರಿಯಾಗಿದ್ದರೆ, ಶಾರೂಖ್ ಅವರ ‘ಜವಾನ್’ ಆಸ್ಕರ್ ತಲುಪಬೇಕು. ಇದಕ್ಕಾಗಿ ನಾನು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇನೆ. ಚಿತ್ರರಂಗದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ತಂತ್ರಜ್ಞರು, ನಿರ್ದೇಶಕರು ಸೇರಿದಂತೆ ಎಲ್ಲರ ಕಣ್ಣುಗಳು ಗೋಲ್ಡನ್ ಗ್ಲೋಬ್ಸ್, ಆಸ್ಕರ್, ರಾಷ್ಟ್ರೀಯ ಪ್ರಶಸ್ತಿಗಳ ಮೇಲೆ ಇರುತ್ತದೆ” ಎಂದು ಹೇಳಿದರು.
ಇದನ್ನೂ ಓದಿ: ವಿಮೋಚನಾ ಹೋರಾಟದ ಇತಿಹಾಸ ಯುವ ಪೀಳಿಗೆಗೆ ತಲುಪಿಸಬೇಕಿದೆ-ಅಷ್ಠಗಿ
“ಹಾಗಾಗಿ ಖಂಡಿತವಾಗಿ, ನಾನು ಕೂಡ ನಮ್ಮ ಸಿನಿಮಾ ಆಸ್ಕರ್‌ಗೆ ಕೊಂಡೊಯ್ಯಲು ಬಯಸುತ್ತೇನೆ” ಎಂದು ಹೇಳಿದ್ದಾರೆ. ಚಿತ್ರದಲ್ಲಿ ಶಾರೂಖ್ ಖಾನ್ ಮತ್ತು ನಯನತಾರ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ವಿಜಯ್ ಸೇತುಪತಿ, ದೀಪಿಕಾ ಪಡುಕೋಣೆ, ಪ್ರಿಯಾಮಣಿ, ಐಜಾಜ್ ಖಾನ್, ಸಂಜೀತಾ ಭಟ್ಟಾಚಾರ್ಯ, ಸನ್ಯಾ ಮಲ್ಹೋತ್ರಾ, ಗ್ರಿಜಾ ಓಕ್, ಲೆಹರ್ ಖಾನ್, ಆಲಿಯಾ ಖುರೇಷಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ,(ಏಜೆನ್ಸೀಸ್).