More

  ವಿಮೋಚನಾ ಹೋರಾಟದ ಇತಿಹಾಸ ಯುವ ಪೀಳಿಗೆಗೆ ತಲುಪಿಸಬೇಕಿದೆ-ಅಷ್ಠಗಿ

  ವಿಜಯವಾಣಿ ಸುದ್ದಿಜಾಲ ಕಲಬುರಗಿ

  ಅಂದಿನ ಹೈದರಾಬಾದ್ ಕರ್ನಾಟಕ ಇಂದಿನ ಕಲ್ಯಾಣ ಕರ್ನಾಟಕದ ವಿಮೋಚನೆಗಾಗಿ ಪ್ರಾಣ ತ್ಯಾಗಮಾಡಿದ, ಹೋರಾಡಿದ ಹೋರಾಟಗಾರರ ಇತಿಹಾಸ ಇಂದಿನ ಯುವ ಪೀಳಿಗೆಗೆ ತಲುಪಿಸಬೇಕಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ ಹೇಳಿದರು.

  ಕಕ ಉತ್ಸವ ದಿನಾಚರಣೆಯ ನಿಮಿತ್ತವಾಗಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಕಲಬುರಗಿ ನಗರದಲ್ಲಿರುವ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿ ಹೈದರಾಬಾದ್ ನಿಜಾಮರ ಅರಸೊತ್ತಿಗೆಯ ಆಡಳಿತಕ್ಕೆ ಒಳಪಟ್ಟಿದ್ದ ಹೈದರಾಬಾದ್ ಪ್ರಾಂತ್ಯಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದ 13 ತಿಂಗಳುಗಳ ನಂತರ, ಎಂದರು.

  ಹೈದರಾಬಾದ್ ಅರಸ ನಿಜಾಮನು ಭಾರತ ಒಕ್ಕೂಟಕ್ಕೆ ಸೇರಲು ನಿರಾಕರಿಸಿ ತನ್ನದು ಸ್ವತಂತ್ರ ಸಾಮ್ರಾಜ್ಯವೆಂದು ಘೋಷಿಸಿದ ನಂತರ ಈ ಭಾಗದ ಹೋರಾಟಗಾರರು ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುಂದಾದ ನಂತರ ನಿಜಾಮ ಸೇನೆಯ ಮುಖ್ಯಸ್ಥ ಖಾಸಿಮ್ ರಜ್ವಿ 13 ತಿಂಗಳುಗಳ ಕಾಲ ನಡೆಸಿದ ದೌರ್ಜನ್ಯಗಳು, ದೊಂಬಿಗಳು ಅದರಲ್ಲಿ ಪ್ರಮುಖವಾಗಿ ಬೀದರ್ ಜಿಲ್ಲೆಯ ಗೋರಟಾ ಗ್ರಾಮದ ಸಾಮೂಹಿಕ ಹತ್ಯಾಕಾಂಡ, ಮತ್ತು ಇತರ ಭಾಗದಲ್ಲಿ ನಡೆಸಿದ ಲೂಟಿಗಳಿಗೆ ತಿಲಾಂಜಲಿ ಹಾಡಲು ಹೋರಾಟದ ಪ್ರಮುಖ ರೂವಾರಿ ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ ನಡೆದ ನಿರಂತರ ಹೋರಾಟಗಳ‌ ನಂತರ ದೇಶದ ಏಕೀಕರಣ ರೂವಾರಿ ದೇಶದ ಅಂದಿನ ಗೃಹ ಸಚಿವ ಸರ್ದಾರ್ ಪಟೇಲ್ ಅವರು ಕಾನೂನು ಸಚಿವರಾಗಿದ್ದ ಡಾ. ಅಂಬೇಡ್ಕರ್ ಅವರ ಸಲಹೆಯಂತೆ ಮಿಲಿಟರಿ ಕಾರ್ಯಾಚರಣೆ ಬದಲಾಗಿ “ಆಪರೇಷನ್ ಪೋಲೋ” ಹೆಸರಿನ ಪೋಲಿಸ್ ಕಾರ್ಯಚರಣೆ ನಡೆಸಿ ನಿಜಾಮನ ರಜಾಕಾರರ ಪಡೆಯನ್ನು ಶರಣಾಗಿಸಿ ಸೆಪ್ಟೆಂಬರ್ 17,1948 ರಂದು ಹೈದರಾಬಾದ್ ಸಂಸ್ಥಾನವನ್ನು ಭಾರತದ ಒಕ್ಕೂಟದಲ್ಲಿ ಸೇರ್ಪಡೆಗೊಳಿಸಿದ ಕೀರ್ತಿ ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ಸಲ್ಲುತ್ತದೆ ಎಂದರು.

  ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರೀತಮ್ ಪಾಟೀಲ್, ಕಲಬುರಗಿ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಚವ್ಹಾಣ, ಕಾರ್ಯದರ್ಶಿ ಗೋಪಾಲಕೃಷ್ಣ ಸರಡಗಿ, ಅಮಿತ್ ಕುಲಕರ್ಣಿ, ಕಿರಣಕುಮಾರ್, ಅಭಿ ಕುಲಕರ್ಣಿ ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts