ಟಾಟಾ ಟೆಕ್ನಾಲಜೀಸ್​ ಐಪಿಒಗೆ ಭಾರಿ ಡಿಮ್ಯಾಂಡು; ನೀಡುವ ಷೇರು ಮೊತ್ತ ರೂ 3 ಸಾವಿರ ಕೋಟಿ, ಬಿಡ್​ನಲ್ಲಿ ಸಂಗ್ರಹವಾಗಿದ್ದು ರೂ 1.56 ಲಕ್ಷ ಕೋಟಿ

Tata final
Published on

ಮುಂಬೈ: ಟಾಟಾ ಟೆಕ್ನಾಲಜೀಸ್ ಐಪಿಒಗೆ ಅರ್ಜಿ ಸಲ್ಲಿಸಲು ಕೊನೆಯ ದಿನದವರೆಗೆ 69.43 ಪಟ್ಟು ಬೇಡಿಕೆ ವ್ಯಕ್ತವಾಗಿದೆ. ಈ ಐಪಿಒ ನಿರೀಕ್ಷೆಯಂತೆ, ಟಾಟಾ ಗ್ರೂಪ್‌ಗೆ ವ್ಯಾಪಕ ಯಶಸ್ಸನ್ನು ನೀಡಿತು, ಏಕೆಂದರೆ, ಈ ಐಪಿಒ (ಇನಿಷಿಯಲ್​ ಪಬ್ಲಿಕ್​ ಆಫರ್- ಆರಂಭಿಕ ಸಾರ್ವಜನಿಕ ಚಂದಾದಾರಿಕೆ) ಮೂಲಕ ಅಂದಾಜು 3,042 ರೂ. ಸಂಗ್ರಹಿಸಲು ಉದ್ದೇಶಿಸಲಾಗಿದೆ.

ಆದರೆ, ಐಪಿಒ ಬಿಡ್ಡಿಂಗ್‌ನ ಅಂತಿಮ ದಿನವಾದ ನವೆಂಬರ್ 24 ರಂದು 69.43 ಪಟ್ಟು ಹೆಚ್ಚು ಬೇಡಿಕೆ ಬಂದಿದೆ. 2004ರಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಐಪಿಒ ನಂತರ ಟಾಟಾ ಗ್ರೂಪ್‌ನಿಂದ ಬಿಡುಗಡೆ ಮಾಡಲಾದ ಮೊದಲ ಐಪಿಒ ಇದಾಗಿದೆ. ಪ್ರಾರಂಭದ ಮೊದಲ ಗಂಟೆಗಳಲ್ಲಿ ಸಂಪೂರ್ಣವಾಗಿ ಚಂದಾದಾರಿಕೆಯಾಗಿದ್ದು, ಚೊಚ್ಚಲ ದಿನದಂದೇ 6.54 ಪಟ್ಟು ಮತ್ತು 2 ನೇ ದಿನವು 14.85 ಪಟ್ಟು ಚಂದಾದಾರಿಕೆಯ ಬೇಡಿಕೆ ಬಂದಿತು.

ಬಿಡ್ಡಿಂಗ್‌ನ ಕೊನೆಯ ಹಾಗೂ 3ನೇ ದಿನದಂದು ಕೂಡ ಭಾರಿ ಬೇಡಿಕೆ ವ್ಯಕ್ತವಾಗಿ ಒಟ್ಟಾರೆ 69.43 ಪಟ್ಟು ಬಿಡ್​ ಆಗಿದೆ. ಈ ಮೂಲಕ ರೂ 1.56 ಲಕ್ಷ ಕೋಟಿ ಮೊತ್ತದ ಹಣ ಸಂಗ್ರಹವಾಗಿದೆ. ಆದರೆ, ಈ ಐಪಿಒನಲ್ಲಿ ನೀಡಲಾಗುವ ಷೇರುಗಳ ಮೊತ್ತವು ಕೇವಲ 2890 ಕೋಟಿಯಿಂದ 3042 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net