More

  ರಾಜಸ್ಥಾನ ವಿಧಾನಸಭೆ ಚುನಾವಣೆ; ಮಧ್ಯಾಹ್ನದವರೆಗೆ 55.63ರಷ್ಟು ಮತದಾನ; ಮೆಹಂದಿ ಹಚ್ಚಿಕೊಂಡ ಕೈಯಿಂದಲೇ ವಧು ಮತದಾನ

  ರಾಜಸ್ಥಾನ ವಿಧಾನಸಭೆ ಚುನಾವಣೆ; ಮಧ್ಯಾಹ್ನದವರೆಗೆ 55.63ರಷ್ಟು ಮತದಾನ; ಮೆಹಂದಿ ಹಚ್ಚಿಕೊಂಡ ಕೈಯಿಂದಲೇ ವಧು ಮತದಾನ

  ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಇಂದು (ನ.25) ಮತದಾನ ನಡೆಯುತ್ತಿದೆ. ಮಧ್ಯಾಹ್ನ 3ರವರೆಗೆ ಶೇಕಡ 55.63ರಷ್ಟು ಮತದಾನವಾಗಿದೆ.
  200 ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಶ್ರೀಗಂಗಾನಗರದ ಕರಣ್‌ಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗುರ್ಮೀತ್ ಸಿಂಗ್ ಕೂನಾರ್ ನಿಧನದಿಂದಾಗಿ ಈ ಕ್ಷೇತ್ರದ ಚುನಾವಣೆ ಮುಂದೂಡಲಾಗಿದೆ. ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ. 183 ಮಹಿಳೆಯರು ಸೇರಿ 1,875 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 5,26,90,146 ಅರ್ಹ ಮತದಾರರಿದ್ದಾರೆ. ಇದರಲ್ಲಿ 27,358,965 ಪುರುಷರು ಮತ್ತು 25,179,694 ಮಹಿಳೆಯರಿದ್ದಾರೆ.

  ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ.

  2018 ರಲ್ಲಿ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಶೇಕಡಾ 74.72ರಷ್ಟು ಮತದಾನವಾಗಿದೆ. ಈ ಬಾರಿ ಇದಕ್ಕಿಂತ ಹೆಚ್ಚಾಗುವುದೋ ಅಥವಾ ಕಡಿಮೆಯಾಗುವುದೋ ಎಂಬುದನ್ನು ಕಾದು ನೋಡಬೇಕಿದೆ.

  ಮದುವೆ ಸಮಾರಂಭದ ನಡುವೆಯೇ ವಧುವಿನಿಂದ ಮತದಾನ:

  ಮದುವೆಯಾಗುತ್ತಿದ್ದ ವಧು ಒಬ್ಬಳು ವಿವಾಹ ಸಮಾರಂಭದ ನಡುವೆಯೇ ಮತಗಟ್ಟೆ ಬಂದು ಮೊದಲ ಬಾರಿಗೆ ಮತದಾನ ಮಾಡಿದ್ದು ವಿಶೇಷವಾಗಿತ್ತು.
  ರಾಜಸ್ಥಾನದ ಜಲಾವರ್​ನ ಹೌಸಿಂಗ್ ಬೋರ್ಡ್‌ನ ನಿವಾಸಿಯಾದ ವಧು ರುಖ್ಸರ್ ಖಾನ್ ತಮ್ಮ ಮೊದಲ ಮತವನ್ನು ಚಲಾಯಿಸಲು ತಮ್ಮ ವಿವಾಹ ಸಮಾರಂಭಕ್ಕೆ ವಿರಾಮ ನೀಡಿ ಬೆಳಗ್ಗೆಯೇ ಮತಗಟ್ಟೆಗೆ ತೆರಳಿದರು.

  ಕೈಯಲ್ಲಿ ಗೋರಂಟಿ (ಮೆಹಂದಿ) ಧರಿಸಿದ್ದ ರುಖ್ಸಾರ್ ಅವರನ್ನು ಮಾಧ್ಯಮದವರು ಮಾತನಾಡಿಸಿದಾಗ, ತಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಂಡು ಮತ ಚಲಾಯಿಸಲು ಆಗಮಿಸಿದ್ದಾಗಿ ತಿಳಿಸಿದರು. ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ತನ್ನ ಮದುವೆಯನ್ನು ನಿಗದಿಪಡಿಸಲಾಗಿದ್ದರಿಂದ, ನಂತರ ಸಮಯ ಸಿಗುವುದಿಲ್ಲ ಎಂದು ಬೆಳಗ್ಗೆಯೇ ಮತ ಚಲಾಯಿಸಿದ್ದಾಗಿ ಹೇಳಿದರು. 

  ಇದು ತನ್ನ ಮೊದಲ ಬಾರಿಗೆ ಮತದಾನವಾಗಿದ್ದು, ಈ ಅವಕಾಶವನ್ನು ಕಳೆದುಕೊಂಡಿದ್ದರೆ, ಮತ್ತೆ ಮತ ಚಲಾಯಿಸಲು ಇನ್ನೂ ಐದು ವರ್ಷಗಳು ಬೇಕಾಗುತ್ತಿತ್ತು ಎಂದೂ ಅವರು ಹೇಳಿದರೆ. ರುಕ್ಸಾನಾ ಅವರು ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತಾರೆ.

  97ರ ಅಜ್ಜಿಯ ಸಾಹಸ; ಪ್ಯಾರಾಮೋಟರಿಂಗ್ ಮಾಡಿ ಆಗಸದಲ್ಲಿ ಹಾರಾಟ

  ಚಿನ್ನದ ಕುದುರೆ… ನಿಜವಾಗಿಯೂ ಅಸ್ತಿತ್ವದಲ್ಲಿದೆ/ ವೇಗದಲ್ಲೂ ಮುಂದು ಶಕ್ತಿಯೂ ಅಪಾರ

  ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಹತ್ಯೆ ಪ್ರಕರಣದಲ್ಲಿ ನಾಲ್ವರಿಗೆ ಜೀವಾವಧಿ ಶಿಕ್ಷೆ; 15 ವರ್ಷಗಳ ನಂತರ ನ್ಯಾಯಾಲಯದ ತೀರ್ಪು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts