More

    97ರ ಅಜ್ಜಿಯ ಸಾಹಸ; ಪ್ಯಾರಾಮೋಟರಿಂಗ್ ಮಾಡಿ ಆಗಸದಲ್ಲಿ ಹಾರಾಟ

    ಪ್ಯಾರಾಮೋಟರಿಂಗ್ ಒಂದು ರೋಚಕ ಸಾಹಸಮಯ ಕ್ರೀಡೆ. ಪ್ಯಾರಾಮೋಟರಿಂಗ್ ಮಾಡಲು ಗುಂಡಿಗೆ ಗಟ್ಟಿಯಾಗಿರಬೇಕು. ಸಾಹಸ ಮನೋಭಾವದವರಾಗಿರಬೇಕು. ಏಕೆಂದರೆ, ಪ್ಯಾರಾಚೂಟ್​ ಇರುವ ವಾಹನದಲ್ಲಿ ಕುಳಿತು ಜೋರಾಗಿ ವಾಹನ ಓಡಿಸುತ್ತ ಬೆಟ್ಟದ ಮೇಲಿಂದ ಜಿಗಿಯಬೇಕು. ಪ್ಯಾರಾಮೋಟರಿಂಗ್ ಮಾಡುವುದನ್ನೇ ನೋಡಿದೂ ಎದೆ ಝಲ್​ ಎನಿಸುತ್ತದೆ. ಇನ್ನು, ಹೀಗಾಗಿಯೇ, ಯುವಕ, ಯುವತಿಯರು ಕೂಡ ಪ್ಯಾರಾಮೋಟರಿಂಗ್​ ಮಾಡಲು ಹಿಂಜರಿಯುತ್ತಾರೆ.

    ಆದರೆ, 97ರ ವೃದ್ಧೆಯೊಬ್ಬರು ಪ್ಯಾರಾಮೋಟರಿಂಗ್​ ಕುಳಿತು ಆಗಸದಲ್ಲಿ ಹಾರಾಟ ನಡೆಸಿದ್ದು ಈಗ ಬಹುದೊಡ್ಡ ಸುದ್ದಿಯಾಗಿದೆ. ನೂರರ ಆಸುಪಾಸಿನಲ್ಲಿ ಜೀವಂತ ಇರುವುದೇ ಕಷ್ಟಕರು. ಜೀವಂತ ಇದ್ದರೂ ಯಾರದೇ ನೆರವಿಲ್ಲದ ಓಡಾಡುವುದು ಬಹುತೇಕ ಅಸಾಧ್ಯ. ಇಂತಹ ಕಲ್ಪನೆಗಳನ್ನೆಲ್ಲ ಮಹಾರಾಷ್ಟ್ರದ ನಾಗ್ಪುರದ 97 ವರ್ಷದ ಮಹಿಳೆಯೊಬ್ಬರು ಸುಳ್ಳು ಎಂಬಂತಾಗಿಸಿದ್ದಾರೆ. ಪುಣೆಯಲ್ಲಿ ರೋಮಾಂಚಕ ಪ್ಯಾರಾಮೋಟರಿಂಗ್ ಸಾಹಸ ಕೈಗೊಂಡು ಗಗನದಲ್ಲಿ ಪಯಣ ಮಾಡಿದ್ದಾರೆ.

    ಈ ಸಾಹಿಸಿ ವೃದ್ಧೆಯೇ ಉಷಾ ಥೂಸೆ. ಮದುವೆಯಾದ ಹೊಸತರಲ್ಲಿಯೇ ಅವರು ವಿಧವೆಯಾಗಿದ್ದರು. ಆದರೂ ಜೀವನದ ಸವಾಲುಗಳನ್ನು ಎದುರಿಸಿ ಧೈರ್ಯದಿಂದ ಮುನ್ನುಗ್ಗಿದವರು. ಶಾಲಾ ಶಿಕ್ಷಕಿಯಾಗಿ ನಾಲ್ಕು ಹೆಣ್ಣು ಮಕ್ಕಳನ್ನು ಪೋಷಿಸಿಕೊಂಡು ಬಂದರು..

    ಫ್ಲೈಯಿಂಗ್ ರೈನೋ ಪ್ಯಾರಾಮೋಟರಿಂಗ್ ಸಂಸ್ಥೆಯ ಸಿಬ್ಬಂದಿ, ಈ ಮಹಿಳೆಗೆ ಹೆಲ್ಮೆಟ್‌ ತೊಡಿಸಿ ಸುರಕ್ಷಿತವಾಗಿ ಉಪಕರಣಕ್ಕೆ ಜೋಡಿಸಿದ ನಂತರ ಈ ಮಹಿಳೆ ಆಗಸದಲ್ಲಿ ಧೈರ್ಯದಿಂದಲೇ ಪಯಣಿಸಿದರು.

    ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು X ನಲ್ಲಿ ಈ ಕುರಿತು ವೀಡಿಯೊ ಹಂಚಿಕೊಂಡಿದ್ದಾರೆ. X ಬಳಕೆದಾರರು ಉಷಾ ಅವರ ಧೈರ್ಯಕ್ಕೆ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ, ಅವಳನ್ನು “ಅಜ್ಜಿ” ಎಂದು ಪ್ರೀತಿಯಿಂದ ಸಂಬೋಧಿಸಿದ್ದಾರೆ. ಪ್ರೋತ್ಸಾಹದ ಸಂದೇಶಗಳು ಸಾಮಾಜಿಕ ಮಾಧ್ಯಮ ಕ್ಷೇತ್ರದಾದ್ಯಂತ ಪ್ರತಿಧ್ವನಿಸಿದವೆ. ಒಬ್ಬ ಬಳಕೆದಾರನು “ನಿಜವಾಗಿಯೂ ಸ್ಪೂರ್ತಿದಾಯಕ” ಎಂದು ಶ್ಲಾಘಿಸಿದ್ದಾನೆ.
    ವೃದ್ಧೆಯ ಸಾಹಸವು ಎಲ್ಲ ವಯಸ್ಸಿನ ಜನರಿಗೆ ಸ್ಫೂರ್ತಿಯ ದಾರಿದೀಪವಾಗಿದೆ, ಸಾಹಸಮಯ ಹೃದಯವುಳ್ಳವರಿಗೆ ಆಕಾಶವು ಎಂದಿಗೂ ಮಿತಿಯಲ್ಲ ಎಂದು ಸಾಬೀತುಪಡಿಸುತ್ತದೆ ಎಂದೂ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

    ಚಿನ್ನದ ಕುದುರೆ… ನಿಜವಾಗಿಯೂ ಅಸ್ತಿತ್ವದಲ್ಲಿದೆ/ ವೇಗದಲ್ಲೂ ಮುಂದು ಶಕ್ತಿಯೂ ಅಪಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts