

ತರೀಕೆರೆ: ಸರ್ವಾಂಗೀಣ ಪ್ರಗತಿ ಸಾಧಿಸುತ್ತಿರುವ ಸಿದ್ದರಾಮೇಶ್ವರ ಪತ್ತಿನ ಸಹಕಾರ ಸಂಘ ಪ್ರಸಕ್ತ ಆರ್ಥಿಕ ಸಾಲಿನಲ್ಲಿ 25.71 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಬಿ.ರಾಜಪ್ಪ ತಿಳಿಸಿದರು.
ಅಜ್ಜಂಪುರದ ಶ್ರೀ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಸಿದ್ದರಾಮೇಶ್ವರ ಪತ್ತಿನ ಸಹಕಾರ ಸಂಘದ 19ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿಮಾತನಾಡಿದರು. ಸಂಘವು 2023-24ನೇ ಸಾಲಿನಲ್ಲಿ 50 ಕೋಟಿ ರೂ. ವಹಿವಾಟು ನಡೆಸಿದ್ದು ಲಾಭದಲ್ಲಿ ಷೇರುದಾರರಿಗೆ ಶೇ.10ರಷ್ಟು ಹಂಚಿಕೆ ಮಾಡಲಾಗಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ವಾಹನ,ವ್ಯಾಪಾರ, ಕಟ್ಟಡ ನಿರ್ಮಾಣ ಸಾಲ ವಿತರಿಸಲಾಗುತ್ತಿದೆ ಎಂದರು. ಮಹಾಸಭೆಯಲ್ಲಿ ಸಿಬ್ಬಂದಿಗೆ 2 ತಿಂಗಳ ಬೋನಸ್ ಘೋಷಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನುಸನ್ಮಾನಿಸಲಾಯಿತು. ಉಪಾಧ್ಯಕ್ಷ ಎಂ.ಎಸ್.ಸಿದ್ರಾಮಪ್ಪ, ನಿರ್ದೇಶಕರಾದ ಎಂ.ಎನ್.ಶಿವರಾಜ್, ಆರ್.ಕೃಷ್ಣಮೂರ್ತಿ, ಬಿ.ಟಿ.ಗಂಗಾಧರಪ್ಪ, ಓಂಕಾರಪ್ಪ, ಡಿ.ಸಿ.ಶಿವಮೂರ್ತಿ, ಎಂ.ಸಿ.ಪ್ರೇಮಾ,ಕಮಲಮ್ಮ, ಸಿಇಒ ನಾಗರಾಜ್ ಮತ್ತಿತರರಿದ್ದರು.