ಪ್ರಯಾಣದಲ್ಲಿದ್ದ ತಮಿಳುನಾಡು ಸಚಿವರಿಗೆ ಹಠಾತ್ ಎದೆನೋವು; ನಾರಾಯಣ ಹೆಲ್ತ್​ ಸಿಟಿಗೆ ಕರೆ ತರುತ್ತಿರುವ ಬೆಂಬಲಿಗರು

Minister Anil
Published on

ಬೆಂಗಳೂರು: ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಹೃದಯಾಘಾತ, ಕುಸಿದು ಬಿದ್ದು ಸಾವಿಗೀಡಾಗುವ ಪ್ರಕರಣಗಳು ಒಂದರ ಹಿಂದೊಂದರಂತೆ ಸಂಭವಿಸುತ್ತಿರುವ ನಡುವೆಯೇ ತಮಿಳುನಾಡು ಶಿಕ್ಷಣ ಸಚಿವರು ತೀವ್ರ ಎದೆನೋವಿಗೆ ಒಳಗಾಗಿರುವುದು ಆತಂಕ ಉಂಟಾಗಿಸಿದೆ.

ತಮಿಳುನಾಡು ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಅವರಿಗೆ ಇಂದು ಹಠಾತ್ ಎದೆನೋವು ಉಂಟಾಗಿದೆ. ಅವರು ಸೇಲಂನಿಂದ ಚೆನ್ನೈಗೆ ಹೋಗುವ ಮಾರ್ಗಮಧ್ಯೆ ಈ ನೋವು ಉಂಟಾಗಿದೆ. ನೋವು ತೀವ್ರವಾಗಿದ್ದ ಕಾರಣ ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಕರೆತರಲಾಗುತ್ತಿದೆ. ಇನ್ನು ಕೆಲವೇ ನಿಮಿಷಗಳಲ್ಲಿ ಅವರನ್ನು ಬೆಂಬಲಿಗರು ನಾರಾಯಣ ಹೆಲ್ತ್ ಸಿಟಿಗೆ ಕರೆತರಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net