ತಮಿಳುನಾಡು, ಆಂಧ್ರಪ್ರದೇಶದಲ್ಲಿ ಧಾರಾಕಾರ ಮಳೆ, ರೆಡ್ ಅಲರ್ಟ್ ಘೋಷಣೆ; ಚೆನ್ನೈ ಏರ್​ಪೋರ್ಟ್ ಕಾರ್ಯಾರಂಭ, ಸತ್ತವರ ಸಂಖ್ಯೆ 14ಕ್ಕೆ ಏರಿಕೆ

rain pic
Published on

ಚೆನ್ನೈ/ಅಮರಾವತಿ: ತಮಿಳುನಾಡು,ಪುದುಚೆರಿ ಮತ್ತು ಆಂಧ್ರ ಪ್ರದೇಶದ ದಕ್ಷಿಣ ಕರಾವಳಿಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಜನಜೀವನ ಅಕ್ಷರಶಃ ಸ್ತಬ್ಧವಾಗಿದೆ. ಶುಕ್ರವಾರದವರೆಗೆ ಧಾರಾಕಾರ ಮಳೆ ಮುಂದುವರಿಯ ಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ನೆಚ್ಚರಿಕೆ ನೀಡಿದೆ. ಈ ಮಧ್ಯೆ, ರಾಜಧಾನಿ ಚೆನ್ನೈ ಸೇರಿದಂತೆ ತಮಿಳುನಾಡಿನ ವಿವಿಧಡೆ ಮಳೆ ಮತ್ತು ಪ್ರವಾಹದ ಕಾರಣ ಸತ್ತವರ ಸಂಖ್ಯೆ 14ಕ್ಕೆ ಏರಿದೆ.

ಆಂಧ್ರ ಪ್ರದೇಶದ ವಿಶಾಖಪಟ್ಟಣಂ, ಪೂರ್ವ ನೆಲ್ಲೂರು, ಚಿತ್ತೂರು, ಕಡಪಾ, ಗುಂಟೂರು, ಅನಂತಪುರ, ಗೋದಾವರಿ, ಪಶ್ಚಿಮ ಗೋದಾವರಿ, ಕೃಷ್ಣಾ ಮತ್ತು ಕರ್ನಲು ಜಿಲ್ಲೆಗಳ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ. ಆದರೆ ವಾಯುಭಾರ ಒತ್ತಡ ದುರ್ಬಲಗೊಳ್ಳುತ್ತಿರು ವುದರಿಂದ ಚೆನ್ನೈ ಸಹಿತ ಎಂಟು ಜಿಲೆಗಳಲ್ಲಿ ಘೋಷಿಸ ಲಾಗಿದ್ದ ರೆಡ್ ಅಲರ್ಟ್ ಅನ್ನು ಐಎಂಡಿ ವಾಪಸ್ ಪಡೆದಿದೆ. ಜೋರು ಗಾಳಿ ಸಹಿತ ಮಳೆ ಆಗಲಿದೆ ಎಂದು ಹೇಳಿದೆ. ನವೆಂಬರ್ 9 ಮತ್ತು 10ರಂದು ತಮಿಳುನಾಡಿನ ಹಲವು ಭಾಗಗಳಿಗೆ ಅಪ್ಪಳಿಸಿದ್ದ ಚಂಡಮಾರುತ ವಾಯವ್ಯ ಭಾಗದತ್ತ ಚಲಿಸಿ ಉತ್ತರ ತಮಿಳುನಾಡನ್ನು ಹಾದು ಹೋಗಲಿದೆ ಎಂದು ಐಎಂಡಿ ತಿಳಿಸಿದೆ.

ಒತ್ತುವರಿಯಿಂದ ಸಮಸ್ಯೆ: ಚೆನ್ನೈನಲ್ಲಿ ಬುಧವಾರ ರಾತ್ರಿ 8 ಗಂಟೆಯಿಂದ ಧಾರಾಕಾರ ಮಳೆ ಸುರಿದಿದ್ದರಿಂದ ಚೆನ್ನೈ ನಗರದ ಸಬ್​ವೇ ಮತ್ತು ರಸ್ತೆಗಳನ್ನು ತೆರವು ಮಾಡಲು, ಉರುಳಿ ಬಿದ್ದ ಮರಗಳನ್ನು ತೆಗೆಯಲು ಹಾಗೂ ತಗ್ಗು ವಸತಿ ಪ್ರದೇಶಗಳಿಂದ ನೀರನ್ನು ಪಂಪ್ ಮಾಡುವಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರತರಾಗಿದ್ದರು. ಒಂದೆಡೆ ಪ್ರಾಕೃತಿಕವಾಗಿ ಮಳೆಯ ಅಬ್ಬರದಿಂದ ಸಮಸ್ಯೆ ಉಂಟಾದರೆ ಇನ್ನೊಂದೆಡೆ ಮಾನವನಿರ್ವಿುತ ಸಮಸ್ಯೆಗಳು ಚೆನ್ನೈನ ಸಂಕಟ ದ್ವಿಗುಣಗೊಳ್ಳಲು ಕಾರಣವಾಗಿವೆ. ಕೆರೆಗಳ ಸಮೀಪ ವ್ಯಾಪಕವಾಗಿ ಒತ್ತುವರಿ ನಡೆದಿರುವುದರಿಂದ ನೈಸರ್ಗಿಕ ನೀರು ಹರಿದು ಹೋಗುವ ಕಾಲುವೆಗಳು ಮುಚ್ಚಿಹೋಗಿದ್ದು ಸಮಸ್ಯೆಯ ಮೂಲವಾಗಿದೆ. ಹಲವು ದಶಕಗಳಿಂದ ಕೆರೆಗಳ ಒತ್ತುವರಿಯಾಗುತ್ತಿದ್ದು ನಗರದ ಸಂಕಟ ಉಲ್ಬಣಿಸಲು ಕಾರಣವಾಗುತ್ತಿದೆ.

ಜಲಾನಯನ ಪ್ರದೇಶಗಳಲ್ಲಿನ ಪ್ರವಾಹದಿಂದಾಗಿ ರಸ್ತೆಗಳು ಹಾಗೂ ತಗ್ಗು ಪ್ರದೇಶಗಳು ಜಲಾವೃತ ಗೊಳ್ಳಬಹುದು. ಸ್ಥಳೀಯವಾಗಿ ಅಲ್ಲಲ್ಲಿ ಭೂಕುಸಿತ ಸಂಭವಿಸಬಹುದು ಹಾಗೂ ಹಳೆಯ ಕಟ್ಟಡಗಳಿಗೆ ಹಾನಿಯಾಗಬಹುದು ಎಂದೂ ಇಲಾಖೆ ಎಚ್ಚರಿಸಿದೆ.

ಸಂಜೆವರೆಗೆ ವಿಮಾನ ಆಗಮನ ಬಂದ್: ಚೆನ್ನೈನಲ್ಲಿ ಮಳೆಯ ಆರ್ಭಟ ಸಂಜೆ ನಂತರ ಸ್ವಲ್ಪ ಕಡಿಮೆ ಯಾದ್ದರಿಂದ ವಿಮಾನಗಳ ಸಂಚಾರ ಪುನರಾರಂಭವಾಗಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಗಳು ಸಹಜ ಸ್ಥಿತಿಗೆ ಮರಳಿವೆ. ಜೋರಾಗಿ ಗಾಳಿ ಬೀಸಲಿರುವುದರಿಂದ ಮಧ್ಯಾಹ್ನ 1.15, ಸಂಜೆ 6 ಗಂಟೆ ನಡುವೆ ವಿಮಾನಗಳು ಆಗಮಿಸುವುದನ್ನು ರದ್ದುಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net