

ತಮಿಳುನಾಡು: ಡಿಎಂಕೆ ಸಂಸ್ಥಾಪಕ ಸಿ.ಎನ್. ಅಣ್ಣಾದೊರೈ ಅವರ ಜನ್ಮದಿನದ ಅಂಗವಾಗಿ ರಾಜ್ಯದ ಪ್ರತಿ ಮಹಿಳಾ ಕುಟುಂಬದ ಮುಖ್ಯಸ್ಥರಿಗೆ ಮಾಸಿಕ 1 ಸಾವಿರ ರೂ. ಆರ್ಥಿಕ ನೆರವು ಯೋಜನೆಯನ್ನು ಇದೀಗ ತಮಿಳುನಾಡು ಸರ್ಕಾರ ನೂತನವಾಗಿ ಪ್ರಾರಂಭಿಸಿದೆ.
ಕುಟುಂಬದ ಅರ್ಹ ಮಹಿಳಾ ಮುಖ್ಯಸ್ಥರು ಕಲೈಂಜರ್ ಮಗಳಿರ್ ಉರಿಮೈ ತಿಟ್ಟಂ ಅಥವಾ ಕಲೈಂಜರ್ ಮಹಿಳಾ ಹಕ್ಕು ಯೋಜನೆ ಅಡಿಯಲ್ಲಿ ತಿಂಗಳಿಗೆ 1,000 ರೂ.ಗಳನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಲ್ಲಿ ಪಡೆಯಲಿದ್ದಾರೆ. ಈ ಯೋಜನೆಯನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಸಿಎನ್ ಅಣ್ಣಾದೊರೈ ಅವರ ಜನ್ಮಸ್ಥಳವಾದ ಕಾಂಚೀಪುರಂನಲ್ಲಿ ಪ್ರಾರಂಭಿಸಿದ್ದಾರೆ.
ಈ ಯೋಜನೆಯು ಡಿಎಂಕೆಯ ಅತಿದೊಡ್ಡ ಚುನಾವಣಾ ಭರವಸೆಗಳಲ್ಲಿ ಒಂದಾಗಿದ್ದು, 2023 ರಲ್ಲಿ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಈ ಯೋಜನೆಗೆ 7,000 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಇದು ತಮಿಳುನಾಡು ಸರ್ಕಾರದ ಅತಿ ಹೆಚ್ಚು ವೆಚ್ಚದ ಸಮಾಜ ಕಲ್ಯಾಣ ಯೋಜನೆ ಎಂದು ಹೇಳಲಾಗಿದೆ.
ರಾಜ್ಯ ಸರ್ಕಾರದ ಪ್ರಕಾರ, ಈ ಯೋಜನೆಗಾಗಿ 1.63 ಕೋಟಿ ಅರ್ಜಿಗಳನ್ನು ಸ್ವೀಕರಿಸಿದ್ದಾರೆ. ಪರಿಶೀಲನೆಯ ನಂತರ, ಅರ್ಹತಾ ಮಾನದಂಡಗಳ ಆಧಾರದ ಮೇಲೆ 1.06 ಕೋಟಿ ಮಹಿಳೆಯರನ್ನು ಪಟ್ಟಿ ಮಾಡಲಾಗಿದೆ. 1000 ರೂ. ಪಡೆಯಲು ಘೋಷಿಸಿರುವ ಅರ್ಹತೆಯ ಮಾನದಂಡ ಈ ಕೆಳಕಂಡಂತಿದೆ.
ಇದನ್ನೂ ಓದಿ: ಅರ್ಚಕರಾಗಲು ಯಶಸ್ವಿ ತರಬೇತಿ ಪೂರ್ಣಗೊಳಿಸಿದ ಮೂವರು ಯುವತಿಯರು; ಶೀಘ್ರವೇ ನೇಮಕ ಅರ್ಹತೆಯ ಮಾನದಂಡ: