VIDEO| ಬೈಕ್​​ ಮೇಲೆ ಕುಳಿತು ಪರಸ್ಪರ ಅಪ್ಪಿಕೊಂಡು ಲಿಪ್​ಲಾಕ್​ ​​ಮಾಡಿದ ಹುಡುಗಿಯರು!

Girls Kiss
Published on

ತಮಿಳುನಾಡು: ಇತ್ತೀಚಿನ ದಿನಗಳಲ್ಲಿ ಸ್ಟಂಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಒಂದು ಕ್ಷಣ ಉಸಿರು ಬಿಗಿಹಿಡಿದು ನೋಡುವಂತೆ ಮಾಡುವ ದೃಶ್ಯವಿದು. ಈ ದೃಶ್ಯವನ್ನು ಕಂಡ ಬಹುತೇಕರು ಅಪಾಯಕಾರಿ ಸಾಹಸದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೈಕ್​ ಮೇಲೆ ಕುಳಿತ ಇಬ್ಬರು ಹುಡುಗಿಯರು ಒಬ್ಬರನ್ನೊಬ್ಬರು ಚುಂಬಿಸುತ್ತಿರುವುದನ್ನು ಮತ್ತು ತಬ್ಬಿಕೊಳ್ಳುತ್ತಿರುವ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಜಾರ್ಖಂಡ್‌ನ ಸ್ಟಾರ್ಸ್ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಂಡ ಬೈಕ್ ಸ್ಟಂಟ್ ಕ್ಲಿಪ್, ತಮಿಳುನಾಡು ನೋಂದಣಿ ಪ್ಲೇಟ್‌ನೊಂದಿಗೆ ಬೈಕ್‌ನಲ್ಲಿ ಇಬ್ಬರು ಹುಡುಗಿಯರು ಚುಂಬಿಸುತ್ತಾ ತಬ್ಬಿಕೊಂಡು ಬೈಕ್​ ಚಲಾಯಿಸುತ್ತರುವ ಅಪಾಯಕಾರಿ ಸಾಹಸಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?: ಹೆಲ್ಮೆಟ್ ರಹಿತ ಹುಡುಗಿಯರು ಮೊದಲು ಒಬ್ಬರನ್ನೊಬ್ಬರು ಪ್ರೀತಿಯಿಂದ ಅಪ್ಪಿಕೊಳ್ಳುತ್ತಾರೆ. ನಂತರ ಇಬ್ಬರು ಮುತ್ತಿಟ್ಟುಕೊಳ್ಳುತ್ತಾರೆ. ಈ ವೇಳೆ ಅವರಿಬ್ಬರು ಬೈಕ್​​ ಹ್ಯಾಂಡ್​​ ಹಿಡಿಯದೆ ಬ್ಯಾಲೆನ್ಸ್​​ ಮಾಡುತ್ತಾ ಬೈಕ್​​ ಚಲಾಯಿಸುತ್ತಾರೆ. ಈ ವಿಡಿಯೋ ವೈರಲ್​​ ಆಗುತ್ತಿದ್ದಂತೆ ಪರಿಚಿತ ಯುವತಿಯರ ವಿರುದ್ಧ ಪೊಲೀಸ್ ಕ್ರಮಕ್ಕೆ ಒತ್ತಾಯಿಸಿ ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.

ಕಳೆದ ವಾರವಷ್ಟೇ, ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ, ವ್ಯಕ್ತಿಯೊಬ್ಬ ಸ್ಕೂಟಿಯಲ್ಲಿ ತನ್ನ ಗೆಳತಿಯೊಂದಿಗೆ ಇಂತಹ ಅಪಾಯಕಾರಿ ಸಾಹಸ ಮಾಡಿರುವ ವಿಡಿಯೋ ಕೂಡಾ ವೈರಲ್​​ ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net