

ಅಮೆರಿಕ: ಏರ್‌ಲೈನ್ಸ್ ಸಿಬ್ಬಂದಿ ಏರ್‌ಪೋರ್ಟ್ ಗೇಟ್‌ನಲ್ಲೇ ಇಬ್ಬರು ಮಹಿಳೆಯರ ಬಟ್ಟೆ ಬಿಚ್ಚಿಸಿದ ಘಟನೆ ಅಮೆರಿಕದಲ್ಲಿ ನಡೆದಿದೆ.
ಮೇ 2 ರಂದು ಲಾಸ್ ವೇಗಾಸ್‌ನ ಹ್ಯಾರಿ ರೀಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡಡೆದಿದೆ ಎಂದು ತಿಳಿದುಬಂದಿದೆ. ಮಹಿಳೆ ತಾವು ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಧರಿಸಿದ್ದ ಬಟ್ಟೆಯ ಫೋಟೋವನ್ನು ಹಾಗೂ ಬೋರ್ಡಿಂಗ್‌ಗೆ ಬದಲಾಯಿಸಲು ಹೇಳಲಾಗಿದೆ ಎಂಬ ಉಡುಪಿನ ಫೊಟೋವನ್ನು ಶೇರ್ ಮಾಡಿಕೊಂಡು ಈ ಘಟನೆಯ ಕುರಿತು ಕಾಮಿಡಿಯನ್ ಕ್ರಿಸ್ಸಿ ಮೇಯ್ರ್ ಟ್ವೀಟ್ ಮಾಡಿದ್ದಾರೆ.
ಅಮೆರಿಕನ್ ಏರ್‌ಲೈನ್ಸ್ ಉದ್ಯೋಗಿಯೊಬ್ಬರು ಮಹಿಳಾ ಸಹಚರ ಪ್ರಯಾಣಿಕರಾದ ಕೀನು ಸಿ. ಥಾಂಪ್ಸನ್ ಅವರನ್ನು ವಿಮಾನದ ಬೋರ್ಡಿಂಗ್‌ಗೂ ಮೊದಲು ನೀವೂ ಧರಿಸಿದ್ದ ಉಡುಪು ಹೆಚ್ಚು ಮಾಡರ್ನ್ ಆಗಿದೆ ತಮ್ಮ ಪ್ಯಾಂಟ್ ಬದಲಾಯಿಸುವಂತೆ ಒತ್ತಾಯಿಸಿದರು. ಗೇಟ್‌ನಲ್ಲಿ ಬಟ್ಟೆ ಬದಲಿಸಬೇಕಾಯಿತು. ಬಟ್ಟೆ ಬದಲಾಯಿಸಲು ಯಾವುದೇ ಕೊಣೆಯಾಗಲಿ ಇನ್ನಿತರ ವ್ಯವಸ್ಥೆಯಾಗಲಿ ಇರಲಿಲ್ಲ. ನಾವು ಮೊದಲು ಧರಿಸಿದ್ದ ಬಟ್ಟೆಗಳಿಗಿಂತ ನಂತರ ಧರಿಸಿರುವ ಉಡುಪು ಹೆಚ್ಚು ಬಹಿರಂಗವಾಗಿದೆ ಎಂದು ಕಾಮಿಡಿಯನ್ ಕ್ರಿಸ್ಸಿ ಮೇಯ್ರ್ ಹೇಳಿದ್ದಾರೆ.
ಅಮೆರಿಕನ್ ಏರ್‌ಲೈನ್ಸ್ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು, ದಯವಿಟ್ಟು ನಮ್ಮ ಜತೆ ಜಾಯಿನ್ ಆಗಿ, ನಾವು ಇಲ್ಲಿದ್ದೇವೆ ಮತ್ತು ನಿಮ್ಮ ತೊಂದರೆ ಕೇಳಲು ಸಿದ್ಧರಾಗಿದ್ದೇವೆ ಎಂದು ಏರ್‌ಲೈನ್ ಹೇಳಿದೆ.