ತಮನ್ನಾ ಜೊತೆ ಲವ್​ ಹೇಗೆ ಪ್ರಾರಂಭವಾಯಿತು ಎಂಬುದನ್ನು ಬಿಚ್ಚಿಟ್ಟ ವಿಜಯ್ ವರ್ಮಾ!

tttttt
Published on

ಮುಂಬೈ: ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ಬಾಲಿವುಡ್‌ನ ಪವರ್ ಫುಲ್​ ಜೋಡಿ. ಇಬ್ಬರೂ ಅನೇಕ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಈ ಜೋಡಿಯ ಸಂಬಂಧದ ಬಗ್ಗೆ, ನೆಟ್‌ಫ್ಲಿಕ್ಸ್ ಚಲನಚಿತ್ರ ಲಸ್ಟ್ ಸ್ಟೋರೀಸ್ 2 ಚಿತ್ರೀಕರಣದ ಸಮಯದಲ್ಲಿ ಇಬ್ಬರೂ ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದರು ಎಂದು ಆಗಾಗ್ಗೆ ಕೇಳಿಬರುತ್ತದೆ. ಆದರೆ, ಈಗ ವಿಜಯ್ ವರ್ಮಾ, ತಮನ್ನಾ ಅವರೊಂದಿಗಿನ ಸಂಬಂಧದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಮರ್ಡರ್ ಮುಬಾರಕ್ ನಟ, ಚಿತ್ರದ ಶೂಟಿಂಗ್ ಸಮಯದಲ್ಲಿ ಇಬ್ಬರೂ ಡೇಟಿಂಗ್ ಮಾಡಲು ಪ್ರಾರಂಭಿಸಲಿಲ್ಲ ಎಂದು ಹೇಳಿದರು.

ಸಂದರ್ಶನವೊಂದರಲ್ಲಿ ವಿಜಯ್​, ತನ್ನ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ ಮತ್ತು ಇಬ್ಬರೂ ಹೇಗೆ ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದರು ಎಂದು ಹೇಳಿದ್ದಾರೆ.

ಲಸ್ಟ್ ಸ್ಟೋರೀಸ್ 2 ಚಿತ್ರೀಕರಣದ ಸಮಯದಲ್ಲಿ ನಾವಿಬ್ಬರೂ ಡೇಟಿಂಗ್ ಮಾಡಲು ಪ್ರಾರಂಭಿಸಲಿಲ್ಲ ಎಂದು ವಿಜಯ್ ಹೇಳಿದರು.

ನನ್ನ ವೈಯಕ್ತಿಕ ಜೀವನದಲ್ಲಿ ಜನ ತೋರುವ ಆಸಕ್ತಿಯನ್ನು ನೋಡಿ ನಾನು ಆಘಾತಕ್ಕೊಳಗಾಗಿದ್ದೆ. ಆದರೆ ನಂತರ ನಾನು ಅದನ್ನು ಸರಿಪಡಿಸಿಕೊಂಡೆ. ಇದು ನನ್ನ ಚಿತ್ರ ಬಿಡುಗಡೆಗಿಂತ ದೊಡ್ಡ ಸುದ್ದಿಯಾಗಿದೆ. ಜನರು ವಿಷಯಗಳನ್ನು ಹೇಗೆ ನೋಡುತ್ತಾರೆ ಎಂಬುದಕ್ಕೆ ಇದು ದೊಡ್ಡ ನಿದರ್ಶನ ಎಂದು ವಿಜಯ್​ ಹೇಳಿದ್ದಾರೆ.

ಇಷ್ಟಾದರೂ "ನಮ್ಮ ಸಂಬಂಧವು ತುಂಬಾ ಸದೃಢವಾಗಿದೆ. ಅಷ್ಟೇ ಅಲ್ಲ, ಸುಂದರವಾಗಿದೆ. ಈಗ ನಾವು ಅದನ್ನು ಆನಂದಿಸುತ್ತೇವೆ" ಎಂದು ವಿಜಯ್ ವರ್ಮಾ ಹೇಳಿದರು.

ಪ್ರಸ್ತುತ ಮಿರ್ಜಾಪುರ್ 3 ರಲ್ಲಿನ ಅಭಿನಯಕ್ಕಾಗಿ ಪ್ರಶಂಸೆ ಪಡೆಯುತ್ತಿರುವ ನಟ , 2005 ರಲ್ಲಿ ಅವರು ಮತ್ತು ತಮನ್ನಾ ಕಾಕತಾಳೀಯವಾಗಿ ಹೇಗೆ ವಿರುದ್ಧ ದಿಕ್ಕಿನಲ್ಲಿ ಸಾಗಿದರು ಎಂಬುದನ್ನು ಸಹ ಹಂಚಿಕೊಂಡಿದ್ದಾರೆ.

"ನಾನು 2005 ರಲ್ಲಿ ಹೈದರಾಬಾದ್ ಬಿಟ್ಟು ಬಾಂಬೆಗೆ (ಈಗ ಮುಂಬೈ) ಬಂದೆ. ಅವಳು(ತಮನ್ನಾ) ಅದೇ ಸಮಯದಲ್ಲಿ ಬಾಂಬೆಯಿಂದ ಹೈದರಾಬಾದ್‌ಗೆ ಬಂದಳು. ಅವಳು ಹೈದರಾಬಾದಿನಲ್ಲಿ ಸಿನಿ ಜೀವನ ಕಟ್ಟಿಕೊಂಡ ಬಾಂಬೆ ಹುಡುಗಿ, ನಾನು ಹೈದರಾಬಾದ್‌ನ ಹುಡುಗ, ಅವಳು ನಿರರ್ಗಳವಾಗಿ ತಮಿಳು ಮತ್ತು ತೆಲುಗು ಮಾತನಾಡುತ್ತಾಳೆ" ಎಂದು ವಿಜಯ್​ ಹೇಳಿದ್ದಾರೆ.

ಈ ಹಿಂದೆ ತಮನ್ನಾ ಕೂಡ ಸಂದರ್ಶನದಲ್ಲಿ ತಮ್ಮ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ವಿಜಯ್ ಮತ್ತು ಅವರ ನಡುವಿನ ಬಾಂಧವ್ಯ ಸಾಕಷ್ಟು ಸಹಜ ಎಂದು ಹೇಳಿದ್ದರು. "ಅವರು ನಾನು ತುಂಬಾ ಕಾಳಜಿವಹಿಸುವ ವ್ಯಕ್ತಿ. ಆತನ ಜೊತೆಗಿರುವುದು ನನ್ನ ಸಂತೋಷದ ಸ್ಥಳ" ಎಂದು ತಮನ್ನಾ ಹೇಳಿದ್ದರು.

ಈ ಜೋಡಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಿನಿಪ್ರಿಯರನ್ನು ಅಚ್ಚರಿಗೆ ದೂಡಿತ್ತು. ಬಳಿಕ ತಮ್ಮ ಸಂಬಂಧವನ್ನು ಇಬ್ಬರೂ ಒಪ್ಪಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net