

ಮುಂಬೈ: ವಿಶ್ವವೇ ಬೆರಗಾಗುವಂತಹ ಮದುವೆ ಮಾಡುತ್ತಿರುವ ಅಂಬಾನಿ ಕುಟುಂಬ ಸಡಗರದಲ್ಲಿ ಮಿಂದೇಳುತ್ತಿದೆ. ಮುಖೇಶ್ ಮತ್ತು ನೀತಾ ಅಂಬಾನಿ ಪುತ್ರ ಅನಂತ್ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಜು.12ರಂದು ನಡೆಯಲಿದ್ದು, ಮದುವೆಪೂರ್ವ ಕಾರ್ಯಕ್ರಮಗಳು ಎಲ್ಲರ ಗಮನಸೆಳೆಯುತ್ತಿವೆ. ಇದೀಗ ಹಲ್ದಿ(ಅರಿಶಿಣ ಶಾಸ್ತ್ರ ಕಾರ್ಯಕ್ರಮ)ದಲ್ಲಿ ರಾಧಿಕಾ ಅತ್ಯಾಕರ್ಷಕವಾದ ಲೆಹಂಗಾದ ದುಪ್ಪಟ್ಟಾ ಧರಿಸಿದ್ದು ವಿಡಿಯೋ ವೈರಲ್ ಆಗುತ್ತಿದೆ.
ಲೆಹಂಗಾ ಮತ್ತು ದುಪ್ಪಟ್ಟಾವನ್ನು ಸಂಪೂರ್ಣವಾಗಿ ಮಲ್ಲಿಗೆ ಮತ್ತು ಚೆಂಡು ಹೂವುಗಳಿಂದ ಅಲಂಕರಿಸಲಾಗಿದೆ. ಮಲ್ಲಿಗೆ ಹೂವುಗಳು ದುಪ್ಪಟ್ಟಾ ಅಲಂಕಿಸಿದ್ದರೆ, ಬಾರ್ಡರ್ಗೆ ಚೆಂಡುಹೂವುಗಳನ್ನು ಜೋಡಿಸಲಾಗಿದೆ. ಅಷ್ಟೇ ಅಲ್ಲ, ಆಭರಣಗಳಿಗೂ ಮಲ್ಲಿಗೆ ಹೂವುಗಳನ್ನು ಜೋಡಿಸಲಾಗಿದೆ. ಅದ್ಭುತವಾದ ಈ ಡಿಸೈನ್ಎಂತಹವರ ಕಣ್ಣು ಹುಬ್ಬೇರಿಸುವಂತೆ ಮಾಡುತ್ತಿದೆ.
ಈ ದುಪ್ಪಟ್ಟಾವನ್ನು ಜುಲೈ 8ರಂದು ನಡೆದ ಅರಿಶಿಣ ಸಮಾರಂಭದಲ್ಲಿ ರಾಧಿಕಾ ಮರ್ಚೆಂಟ್ ತೊಟ್ಟಿದ್ದರು. ಹಳದಿ ಲೆಹೆಂಗಾ ಇದಾಗಿದ್ದು, ಮಲ್ಲಿಗೆ ಹೂವುಗಳಿಂದ ದುಪಟ್ಟಾ ಅಲಂಕರಿಸಲಾಗಿದೆ. ಹಳದಿ ಲೆಹಂಗಾಕ್ಕೆಮ್ಯಾಚ್ಆಗುವಂತೆ ಹಳದಿ ಚೆಂಡು ಹೂವುಗಳನ್ನು ಪೋಣಿಸಲಾಗಿದೆ. ಹೂವಿನ ದುಪಟ್ಟಾ, ಆಭರಣ ಧರಿಸಿ ರಾಧಿಕಾ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇದನ್ನು ಸೆಲೆಬ್ರಿಟಿ ಸ್ಟೈಲಿಸ್ಟ್ ರಿಯಾ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನು ಈ ಲೆಹಂಗಾ ಮತ್ತು ದುಪ್ಪಟ್ಟಾವನ್ನು ಅನಾಮಿಕಾ ಖನ್ನಾ ವಿನ್ಯಾಸಗೊಳಿಸಿದ್ದಾರೆ. ಮುಂಬೈ-ಬಾಂದ್ರಾದ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಜುಲೈ 12ರಂದು ರಾಧಿಕಾ ಮತ್ತು ಅನಂತ್ ಅಂಬಾನಿ ಮದುವೆ ನಡೆಯಲಿದೆ.