ಸ್ಟುಡಿಯೋಕ್ಕೆ ನುಗ್ಗಿ ಫೋಟೋಗ್ರಾಫರ್​​ಗೆ ತಲ್ವಾರ್​​ನಿಂದ ಹೊಡೆದ ದುಷ್ಕರ್ಮಿಗಳು

Talwar Attack
Published on

ಮಂಗಳೂರು: ಸ್ಟುಡಿಯೋಕ್ಕೆ ನುಗ್ಗಿ ಫೋಟೋಗ್ರಾಫರ್​ ಮೇಲೆ ತಲವಾರಿನಿಂದ ದಾಳಿ ನಡೆಸಿದ ಘಟನೆ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಪರಂಗೀಪೇಟೆಯಲ್ಲಿ ನಡೆದಿದೆ.

ಇಲ್ಲಿನ ಸ್ಟುಡಿಯೋ ಮಾಲೀಕ ದಿನೇಶ್​ ಕೊಟ್ಟಿಂಜ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ದಿನೇಶ್​​ನನ್ನು ಖಾಸಗಿ ಆಸ್ಪ್ರತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್ ಡಿ.ಸೋಜ, ವೃತ್ತ ನಿರೀಕ್ಷಕ ಟಿ‌.ಡಿ.ನಾಗರಾಜ್, ಎಸ್ಐ ಪ್ರಸನ್ನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net