

ನವದೆಹಲಿ: ಕಾಂಗ್ರೆಸ್ ಮುಖಂಡ ಮಣಿ ಶಂಕರ್ ಪ್ರಧಾನಿ ನರೇಂದ್ರ ಮೋದಿಯವರನ್ನು ದುಷ್ಟ ಎಂದು ಕರೆದು ವಿವಾದ ಸೃಷ್ಟಿಸಿದ್ದರು. ಇದೀಗ ಎಐಸಿಸಿ ಡಿಜಿಟಲ್ ಸಂವಹನ ಮತ್ತು ಸಾಮಾಜಿಕ ಮಾಧ್ಯಮದ ರಾಷ್ಟ್ರೀಯ ಸಂಯೋಜಕ ಗೌರವ್ ಪಾಂಡಿ ಪ್ರಧಾನಿ ಮೋದಿ ಓರ್ವ ಕೊಲೆಗೆಡುಕ ಎಂದು ಜರಿದಿದ್ದಾರೆ.
ಈ ಹಿಂದೆ ಮಣಿಶಂಕರ್ ಅಯ್ಯರ್ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸುತ್ತ, ಮೋದಿಯವರು ಕೊಳಕು ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಹುತಾತ್ಮ ಯೋಧರು, ಸೇನೆಯ ತ್ಯಾಗದ ಹೆಸರಿನಲ್ಲಿ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ನರೇಂದ್ರ ಮೋದಿಯವರು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದವರು..ಆ ಬಗ್ಗೆ ಅವರಿಗೆ ಎಚ್ಚರಿಕೆ ನೀಡಬೇಕು ಎಂದು ಹೇಳಿದ್ದರು. ಆಗ ಮಣಿಶಂಕರ್ ಅವರ ಈ ಹೇಳಿಕೆಗಳು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ನಂತರ ಕಾಂಗ್ರೆಸ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಅಮಾನತುಗೊಳಿಸಿತ್ತು. (ಏಜೆನ್ಸೀಸ್)