

ಆಂಧ್ರಪ್ರದೇಶ: ಇತ್ತೀಚೆಗಷ್ಟೇ ನಡೆದ 'ಸೇವಕರ್' ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಲನಚಿತ್ರ ನಿರ್ಮಾಪಕ ಕೆ. ರಾಜನ್ ಮತ್ತು ಹಿರಿಯ ನಿರ್ದೇಶಕ ಕೆ. ಭಾಗ್ಯರಾಜ್ ಪರಸ್ಪರ ಮಾತಿನ ಜಟಾಪಟಿ ನಡೆಸಿದ್ದು, ಇಲ್ಲಿ ಯಾರು ಮುಖ್ಯ ಎಂಬುದರ ಕುರಿತು ತಮ್ಮ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಬಹಿರಂಗವಾಗಿ ಮುಖಕ್ಕೆ ಹೊಡೆದಂತೆ ಮಾತನಾಡಿದ್ದಾರೆ.
ಇದನ್ನೂ ಓದಿ: ಆತಂಕ ತರಿಸಿದ ಚಿಕ್ಕಮಕ್ಕಳಿಗೆ ಹೃದ್ರೋಗ
ಮೊದಲು ವೇದಿಕೆಯ ಮೇಲೆ ಬಂದ ನಿರ್ಮಾಪಕ ಕೆ. ರಾಜನ್, "ಒಬ್ಬ ನಿರ್ಮಾಪಕ ಇಲ್ಲ ಅಂದರೆ ಅಲ್ಲಿ ಯಾವ ನಿರ್ದೇಶಕನೂ ಇಲ್ಲ. ಒಂದು ಚಿತ್ರಕ್ಕೆ ನಿರ್ದೇಶಕ ಮತ್ತು ನಾಯಕನಿಗಿಂತ ನಿರ್ಮಾಪಕರೇ ಅತೀ ಮುಖ್ಯ. ಕಾಲಿವುಡ್‌ನಲ್ಲಿ ವರ್ಷಕ್ಕೆ 200ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುತ್ತವೆ. ಇತ್ತೀಚೆಗಿನ ದಿನಗಳಲ್ಲಿ ದೊಡ್ಡ ಮಟ್ಟದ ಚಿತ್ರಗಳು ನಿರಾಸೆ ಮೂಡಿಸಿದರೆ, ಸಣ್ಣ ಚಿತ್ರಗಳು, ಹೊಸಬ್ಬರ ಸಿನಿಮಾಗಳು ಯಶಸ್ಸು ಕಂಡಿರುವುದು ಚಿತ್ರರಂಗಕ್ಕೆ ಮತ್ತು ಸಣ್ಣ ನಿರ್ಮಾಪಕರಿಗೆ ಯಶಸ್ಸು ತಂದುಕೊಟ್ಟಿದೆ" ಎಂದರು.
ಇನ್ನು ರಾಜನ್ ಅವರ ನಿರ್ಮಾಪಕ ಹೆಚ್ಚು ಎಂಬ ಹೇಳಿಕೆಗೆ ಗರಂ ಆಗಿದ್ದ ಭಾಗ್ಯರಾಜ್, "ಇಲ್ಲಿ ನಿರ್ಮಾಪಕ, ನಿರ್ದೇಶಕ ಅಥವಾ ಹೀರೋ ಅಂತ ಏನಿಲ್ಲ. ನಿಜ ಹೇಳಬೇಕೆಂದರೆ, ಒಂದೊಳ್ಳೆ ಕಥೆ ಇಲ್ಲದಿದ್ದರೆ ನಿರ್ಮಾಪಕರೇ ಇಲ್ಲ. ಒಬ್ಬ ವ್ಯಕ್ತಿಗೆ ಒಮ್ಮೆ ಸಿನಿಮಾದ ಬಗ್ಗೆ ಒಲವು ಬೆಳೆದರೆ ಅದು ಹೋಗುವುದಿಲ್ಲ. 25 ದಿನಗಳಲ್ಲಿ ಈ ಸಿನಿಮಾದ ಶೂಟಿಂಗ್ ಮುಗಿಸಿರುವುದು ಒಳ್ಳೆಯ ಫಲಿತಾಂಶ. ಈ ಚಿತ್ರ ಯಶಸ್ವಿಗೊಂಡು ಎಲ್ಲರಿಗೂ ಒಳ್ಳೆಯ ಹೆಸರು ತರಲಿ" ಎಂದು ಹೇಳುವ ಮೂಲಕ ನಿರ್ಮಾಪಕರ ಹೇಳಿಕೆಗೆ ವೇದಿಕೆಯಲ್ಲೇ ತಿರುಗೇಟು ನೀಡಿದ್ದು ಇದೀಗ ಅನೇಕರ ಹುಬ್ಬೇರಿಸಿದೆ,(ಏಜೆನ್ಸೀಸ್).