ತಾಲಿಬಾನ್ ಸಚಿವ ಅಮೀರ್ ಖಾನ್ ಮುತ್ತಕಿ ತಾಜ್​ಮಹಲ್ ಭೇಟಿ ದಿಢೀರ್​ ರದ್ದು! | Taj Mahal

untitled-design-2025-10-12t133653927-68eb61cb477dd
Published on

ಆಗ್ರಾ: ಅಫ್ಘಾನಿಸ್ತಾನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರ ಭಾನುವಾರದ ಆಗ್ರಾ( Taj Mahal) ಭೇಟಿಯನ್ನು ದಿಢೀರ್​ ರದ್ದುಗೊಳಿಸಲಾಗಿದೆ. ಆದಾಗ್ಯೂ, ಆಗ್ರಾದ ಅಧಿಕಾರಿಗಳು ರದ್ದತಿ ಬಗ್ಗೆ ಯಾವುದೇ ಕಾರಣವನ್ನು ಉಲ್ಲೇಖಿಸಿಲ್ಲ ಎಂದು ವರದಿಯಾಗಿದೆ.

ದೆಹಲಿಗೆ ಹಿಂತಿರುಗುವ ಮೊದಲು ಮುತಾಕಿ ತಾಜ್​ಮಹಲ್​ ಸ್ಮಾರಕದಲ್ಲಿ ಸುಮಾರು ಒಂದೂವರೆ ಗಂಟೆ ಕಳೆಯಬೇಕಿತ್ತು. ಆದರೆ, ದಿಢೀರ್​ ರದ್ಧತಿಗೆ ಕಾರಣವಿಲ್ಲವಾದರೂ ಜಿಲ್ಲಾಡಳಿತದ ಶಿಷ್ಟಾಚಾರ ವಿಭಾಗವು ಸಹ ರದ್ದತಿಯನ್ನು ದೃಢಪಡಿಸಿದೆ.

ಇನ್ನು ಅಮೀರ್ ಖಾನ್ ಮುತ್ತಕಿ ಸುದ್ದಿಗೋಷ್ಠಿಗೆ ಮಹಿಳಾ ಪತ್ರಕರ್ತರಿಗೆ ನಿರ್ಬಂಧಿಸಿದ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಜಟಾಪಟಿ ನಡೆಯುತ್ತಿದೆ. ಈ ನಡುವೆ ತಾಜ್​ಮಹಲ್​ ಭೇಟಿ ದಿಢೀರ್ ರದ್ದಾಗಿದೆ.​

6 ದಿನಗಳ ಪ್ರವಾಸಕ್ಕಾಗಿ ಗುರುವಾರ ನವದೆಹಲಿಗೆ ಬಂದಿಳಿದ ಮುತಾಕಿ, ನಾಲ್ಕು ವರ್ಷಗಳ ಹಿಂದೆ ತಾಲಿಬಾನ್ ಗುಂಪು ಅಧಿಕಾರವನ್ನು ವಶಪಡಿಸಿಕೊಂಡ ನಂತರ ಭಾರತಕ್ಕೆ ಭೇಟಿ ನೀಡುತ್ತಿರುವ ಮೊದಲ ಹಿರಿಯ ತಾಲಿಬಾನ್ ಸಚಿವರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net