ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ

ಪಟ್ಟಣದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಸಮುದಾಯವರೊಂದಿಗೆ ಸಭೆ ನಡೆಸಿದ ವಿಶ್ವಕರ್ಮ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಸುಜ್ಞಾನಮೂರ್ತಿ ನಿಗಮದ ಯೋಜನೆಗಳ ಕುರಿತು ವಿವರಿಸಿದರು. ಕಾರ್ಯದರ್ಶಿ ರೇವಣ್ಣಾಚಾರ್, ನಿವೃತ್ತ ನೌಕರ ಮಂಜುನಾಥ್, ಮುಖಂಡ ಕನ್ನಡ ಸೋಮಣ್ಣ, ಸುಬ್ರಹ್ಮಣ್ಯ, ಅರ್ಚಕ ಮಲ್ಲೇಶ್ ಇದ್ದರು.
ಪಟ್ಟಣದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಸಮುದಾಯವರೊಂದಿಗೆ ಸಭೆ ನಡೆಸಿದ ವಿಶ್ವಕರ್ಮ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಸುಜ್ಞಾನಮೂರ್ತಿ ನಿಗಮದ ಯೋಜನೆಗಳ ಕುರಿತು ವಿವರಿಸಿದರು. ಕಾರ್ಯದರ್ಶಿ ರೇವಣ್ಣಾಚಾರ್, ನಿವೃತ್ತ ನೌಕರ ಮಂಜುನಾಥ್, ಮುಖಂಡ ಕನ್ನಡ ಸೋಮಣ್ಣ, ಸುಬ್ರಹ್ಮಣ್ಯ, ಅರ್ಚಕ ಮಲ್ಲೇಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ ಸಲಹೆ
  • ಶ್ರೀಕಾಳಿಕಾಂಬ ದೇವಾಲಯದಲ್ಲಿ ಇತೀಚೆಗೆ ಆಯೋಜಿಸಿದ್ದ ಸಭೆ
ಹೊಳೆನರಸೀಪುರ: ಸರ್ಕಾರ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನಿಗಮಗಳನ್ನು ಸ್ಥಾಪಿಸುವ ಮೂಲಕ ಹತ್ತಾರು ವಿಶೇಷ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಸವಲತ್ತು ಹೊಂದಲು ಅರ್ಹರು ಮುಂದಾಗಬೇಕು ಎಂದು ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ ತಿಳಿಸಿದರು.
ಪಟ್ಟಣದ ಶ್ರೀಕಾಳಿಕಾಂಬ ದೇವಾಲಯದಲ್ಲಿ ಇತೀಚೆಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನಿಗಮ ಒತ್ತು ನೀಡಿದೆ. ಕಾರ್ಮಿಕರ ಮಕ್ಕಳು ಉನ್ನತ ವ್ಯಾಸಂಗ ನಡೆಸಲು 3 ಲಕ್ಷ ರೂ.ವರೆಗೆ ಸಹಾಯಧನ ನೀಡುತ್ತದೆ. 4 ವರ್ಷದ ಕೋರ್ಸ್‌ಗಳಿಗೆ ಹೆಚ್ಚಿನ ಹಣ ನೀಡಲಾಗುತ್ತಿದೆ. ಅನಾರೋಗ್ಯ, ಮದುವೆ ಹಾಗೂ ಕೆಲಸ ಪರಿಕರಗಳನ್ನು ವಿತರಿಸುವ ಹತ್ತಾರು ಯೋಜನೆಗಳು ಇವೆ. ಇವುಗಳನ್ನು ತಿಳಿದು ಸವಲತ್ತುಗಳನ್ನು ಅರ್ಹ ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಈ ಮೂಲಕ ಜನಾಂಗ ಅಭಿವೃದ್ಧಿಯಾಗಬೇಕಿದೆ ಎಂದರು.
ತಾಲೂಕು ಅಧ್ಯಕ್ಷ ಗಂಗಾಧರಾಚಾರ್ ಮಾತನಾಡಿ, ವಿಶ್ವಕರ್ಮ ಜನಾಂಗದವರು ಕೆಲಸದಲ್ಲಿ ನೈಪುಣ್ಯತೆ ಹೊಂದಿದ್ದಾರೆ. ಆದರೆ ಇಂದಿನ ಜಾಗತೀಕರಣದ ಪ್ರಭಾವ ಎಲ್ಲವೂ ಯಾಂತೀಕೃತವಾಗಿದೆ. ಹೀಗಾಗಿ ಸಮಯ, ವೆಚ್ಚವೂ ಕಡಿಮೆಯಾಗುತ್ತಿದೆ. ಕರಕುಶಲ ಕರ್ಮಿಗಳಿಗೆ ಬೇಡಿಕೆ ಇದ್ದೇ ಇದ್ದರೂ, ಅವಕಾಶ ಕಡಿಮೆಯಾಗಿದೆ. ಕುಶಲಕರ್ಮಿಗಳು ಇದರಿಂದ ಮಕ್ಕಳನ್ನು ಪಾರಂಪರಿಕ ಉದ್ಯೋಗ ಮುಂದುವರಿಸಲು ಇಚ್ಛಾಸಕ್ತಿ ತೋರುತ್ತಿಲ್ಲ. ಇಂತಹದ್ದೇ ಹಲವು ಸಮಸ್ಯೆಗಳು ಸಮುದಾಯವನ್ನು ಕಾಡುತ್ತಿದೆ. ಇವುಗಳಿಗೆ ಸರ್ಕಾರದ ಹಂತದಲ್ಲಿ ಚರ್ಚಿಸಿ ಪರಿಹಾರ ರೂಪಿಸಿಕೊಡಿ ಎಂದು ಕೋರಿದರು.
ಕಾರ್ಯದರ್ಶಿ ರೇವಣ್ಣಾಚಾರ್, ನಿವೃತ್ತ ನೌಕರ ಮಂಜುನಾಥ್, ಮುಖಂಡ ಕನ್ನಡ ಸೋಮಣ್ಣ, ಸುಬ್ರಹ್ಮಣ್ಯ, ಅರ್ಚಕ ಮಲ್ಲೇಶ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net