ಭೋಲೆನಾಥನ ದರ್ಶನ ಪಡೆದ ನಟಿ ಸಾರಾ ಅಲಿ ಖಾನ್, ವಿಡಿಯೋ ನೋಡಿ ಕೊಂಡಾಡಿದ ಅಭಿಮಾನಿಗಳು

saara
Published on

ನವದೆಹಲಿ: ಬಾಲಿವುಡ್ ನಟಿ ಸಾರಾ ಅಲಿ ಖಾನ್ ಪ್ರತಿ ಧರ್ಮಕ್ಕೂ ಪ್ರಾಮುಖ್ಯತೆ ನೀಡುತ್ತಾರೆ. ಅವರು ಆಗಾಗ್ಗೆ ದೇವಸ್ಥಾನಗಳಿಗೆ ಭೇಟಿ ನೀಡುವುದನ್ನು ಕಾಣಬಹುದು. ಇದೇ ಕಾರಣಕ್ಕೆ ಅನೇಕ ಬಾರಿ ಟ್ರೋಲ್ ಕೂಡ ಆಗುತ್ತಾರೆ. ಆದರೆ ಭಕ್ತಿಯಲ್ಲಿ ಮಗ್ನಳಾದ ನಟಿ ಇದನ್ನೆಲ್ಲಾ ಲೆಕ್ಕಿಸುವುದಿಲ್ಲ. ಇತ್ತೀಚೆಗೆ ಅವರು ಜಮ್ಮು ಮತ್ತು ಕಾಶ್ಮೀರದ ಅಮರನಾಥ ಧಾಮಕ್ಕೆ ಭೇಟಿ ನೀಡಿದ್ದರು.

ಅಮರನಾಥ ಯಾತ್ರೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಹಲವು ಮಂದಿ ಅವರನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ವಿಡಿಯೋದಲ್ಲಿ ನಟಿ ಕೈಯಲ್ಲಿ ಲಾಠಿ ಹಿಡಿದು ಅಮರನಾಥ ಯಾತ್ರೆ ನಡೆಸುತ್ತಿರುವುದನ್ನು ಕಾಣಬಹುದು.

ಅಮರನಾಥ್ ಧಾಮ್‌ನ ವಿಡಿಯೋದಲ್ಲಿ, ಸಾರಾ ತನ್ನ ಕುತ್ತಿಗೆಗೆ ಸಣ್ಣ ಶಾಲು ಮತ್ತು ಕೆಂಪು ಚುನ್ರಿ ಧರಿಸಿರುವುದನ್ನು ಕಾಣಬಹುದು. ಅಮರನಾಥ ಗುಹೆಯ ಕಡೆಗೆ ಕೈ ತೋರಿಸಿ ತಮ್ಮ ಪ್ರಯಾಣದ ಆರಂಭದ ಬಗ್ಗೆ ಹೇಳಿರುವ ಸಾರಾ ಅನೇಕ ಜನರ ಗುಂಪಿನಲ್ಲಿ ಭೋಲೆನಾಥನ ಸನ್ನಿಧಿಗೆ ತೆರಳಿದರು.

ಈ ಹಿಂದೆ ಸಾರಾ ಸೋನ್ಮಾರ್ಗ್‌ನಿಂದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಫೋಟೋಗಳಲ್ಲಿ ಅವರು ಕಣಿವೆಗಳನ್ನು ನೋಡಿ ಆನಂದಿಸುತ್ತಿರುವುದನ್ನು ಕಾಣಬಹುದು. ಕೆಲವೊಮ್ಮೆ ಸಾರಾ ಅಲ್ಲಿನ ಮಕ್ಕಳೊಂದಿಗೆ ತಮ್ಮ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದರು. ಅಭಿಮಾನಿಗಳು ಸದ್ಯ ಸಾರಾ ಅವರ ಫೋಟೋವನ್ನು ಲೈಕ್ ಮಾಡುವುದರ ಜೊತೆಗೆ, ಅವರ ಸರಳತೆಯನ್ನು ಶ್ಲಾಘಿಸಿದ್ದಾರೆ.

ಸಾರಾ ಅಲಿ ಖಾನ್ ಅವರ ' ಜರಾ ಹಟಕ್ ಜರಾ ಬಚ್ಕೆ ' ಕಳೆದ ತಿಂಗಳು ಬಿಡುಗಡೆಯಾಯಿತು. ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ವಿಕ್ಕಿ ಕೌಶಲ್ ಜೊತೆ ಕಾಣಿಸಿಕೊಂಡಿದ್ದಾರೆ ಸಾರಾ. ಈ ಚಿತ್ರದ ಕಥೆಯ ಜೊತೆಗೆ ಇಬ್ಬರ ನಟನೆ ಮತ್ತು ಜೋಡಿ ಕೂಡ ಅಭಿಮಾನಿಗಳಿಗೆ ಇಷ್ಟವಾಗಿದೆ. ಜರಾ ಹಟಕ್ ಜರಾ ಬಚ್ಕೆ ಸಾರಾ ಅಲಿ ಖಾನ್ ಅವರ ಹಿಟ್ ಚಿತ್ರಗಳಲ್ಲಿ ಒಂದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net