More

    ಹೀಗೂ ಉಂಟೆ…?, ಯುಎಸ್ ಮೃಗಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ‘ಗಂಡು’ ಗೊರಿಲ್ಲಾ!

    ಅಮೆರಿಕಾ: ಯುಎಸ್‌ನ ಓಹಿಯೋದಲ್ಲಿನ ಕೊಲಂಬಸ್ ಮೃಗಾಲಯ ಮತ್ತು ಅಕ್ವೇರಿಯಂನಲ್ಲಿರುವ ಸಿಬ್ಬಂದಿಗೆ ಆ ದೃಶ್ಯ ನೋಡುತ್ತಿದ್ದಂತೆ ಒಮ್ಮೆಲೆ ಅಚ್ಚರಿಯಾಯಿತು. ಏಕೆಂದರೆ ಅವರು ಇದ್ದಕ್ಕಿದ್ದಂತೆ ಮಗುವಿಗೆ ಹಾಲುಣಿಸುವ ‘ಗಂಡು’ ಗೊರಿಲ್ಲಾವನ್ನು ನೋಡಿದರು. ಆದರೆ ವಿವರವಾಗಿ ಪರಿಶೀಲಿಸಿದ ನಂತರ ಆ ಗೊರಿಲ್ಲಾ ಗಂಡಲ್ಲ, ಹೆಣ್ಣು ಎಂದು ಅರಿತುಕೊಂಡರು.

    ಪೋಸ್ಟ್ ಹಂಚಿಕೊಂಡ ಮೃಗಾಲಯ
    ಈ ಘಟನೆಯ ಬಗ್ಗೆ ತಮ್ಮ ಅಧಿಕೃತ ಇನ್ಸ್ಟಾಗ್ರಾಂನಲ್ಲಿ ವಿವರವಾಗಿ ಹಂಚಿಕೊಂಡ ಮೃಗಾಲಯವು ” ಗೊರಿಲ್ಲಾ ಕುಟುಂಬವು ಹೆಣ್ಣು ಗೊರಿಲ್ಲಾ ಮರಿ ಅನಿರೀಕ್ಷಿತ ಜನನದೊಂದಿಗೆ ಸ್ವಲ್ಪ ದೊಡ್ಡದಾಗಿದೆ. ಆದರೆ ಇಲ್ಲೊಂದು ನಂಬಲಾಸಾಧ್ಯ ಸಂಗತಿಯಿದೆ. ಆರಂಭದಲ್ಲಿ ಮಗುವಿಗೆ ಜನ್ಮ ನೀಡಿದ ಈ ಹೆಣ್ಣು ಗೊರಿಲ್ಲಾವನ್ನು ಗಂಡು ಎಂದು ನಂಬಿದ್ದೆವು. ವಾಸ್ತವವಾಗಿ ಇದು ಹೆಣ್ಣು ಗೊರಿಲ್ಲಾ ನಮ್ಮ ಸಿಬ್ಬಂದಿ ಇತ್ತೀಚೆಗೆ ಕಂಡುಹಿಡಿದಿದ್ದಾರೆ. ಕಾಂಗೋ ಮತ್ತು ಅನಿಮಲ್ ಹೆಲ್ತ್ ಕೇರ್ ತಂಡಗಳು ತಾಯಿ ಮತ್ತು ಮಗುವನ್ನು ಗಮನಿಸುತ್ತಿದ್ದಾರೆ” ಎಂದು ಬರೆದುಕೊಂಡಿದೆ. ಈ ಪೋಸ್ಟ್ ಅನ್ನು ಜುಲೈ 21 ರಂದು ಹಂಚಿಕೊಳ್ಳಲಾಗಿದೆ. ಇದುವರೆಗೆ ಇದು ಸುಮಾರು 10,000 ಲೈಕ್ಸ್ ಪಡೆದಿದೆ. ಪೋಸ್ಟ್‌ಗೆ ಪ್ರತಿಕ್ರಿಯಿಸುವಾಗ ಜನರು ಸ್ಥಳದಲ್ಲಿದ್ದ ಸಿಬ್ಬಂದಿ ಅಥವಾ ಪಶುವೈದ್ಯರು ಗೊರಿಲ್ಲಾ ಲಿಂಗ ಪತ್ತೆಹಚ್ಚಲು ಏಕೆ ಸಾಧ್ಯವಾಗಲಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.

    ತಜ್ಞರು ಏನು ಹೇಳುತ್ತಾರೆ?
    ಈ ಘಟನೆಯ ಕುರಿತು ವಿವರಿಸಿರುವ ಮೃಗಾಲಯವು ಗೊರಿಲ್ಲಾಗಳು ಚಿಕ್ಕದಿರುವಾಗ ಗಂಡು ಅಥವಾ ಹೆಣ್ಣು ಎಂದು ಹೇಳುವುದು ಕಷ್ಟ. ಸುಮಾರು 8 ವರ್ಷ ವಯಸ್ಸಿನವರೆಗೆ ಗಂಡು ಮತ್ತು ಹೆಣ್ಣು ಒಂದೇ ಗಾತ್ರದಲ್ಲಿರುತ್ತವೆ. ಪ್ರಮುಖ ಅಂಗಗಳನ್ನು ಹೊಂದಿರುವುದಿಲ್ಲ. ಗೊರಿಲ್ಲಾಗಳು ವಯಸ್ಸಾದಂತೆ ದ್ವಿರೂಪವಾಗುತ್ತವೆ. ಅಂದರೆ ಗಂಡು ಮತ್ತು ಹೆಣ್ಣು ತುಂಬಾ ವಿಭಿನ್ನವಾಗಿ ಕಾಣುತ್ತವೆ. ಆದರೂ ಗಂಡು ಗೊರಿಲ್ಲಾಗಳಿಗೆ 12 ವರ್ಷದವರೆಗೆ ತಮ್ಮ ಗಾತ್ರ, ಬೆನ್ನು ಮತ್ತು ದೊಡ್ಡ ತಲೆ ಉಬ್ಬುಗಳು (ಸಗಿಟ್ಟಲ್ ಕ್ರೆಸ್ಟ್ಸ್ ಎಂದು ಕರೆಯುತ್ತಾರೆ) ಅಭಿವೃದ್ಧಿ ಹೊಂದಿರುವುದಿಲ್ಲ ಎಂದು ಹೇಳಿದ್ದಾರೆ. ಇದಲ್ಲದೆ, ಹೆಣ್ಣು ಗೊರಿಲ್ಲಾ ಜನಿಸಿದ ಸ್ಥಳವು ಹ್ಯಾಂಡ್ಸ್-ಆಫ್ ವಿಧಾನ ಹೊಂದಿತ್ತು. ಆದ್ದರಿಂದ ಲಿಂಗವನ್ನು ಬೇಗ ಕಂಡುಹಿಡಿಯಲಾಗಲಿಲ್ಲ ಎಂದು ವಿವರಿಸಿದ್ದಾರೆ.

    ಪೌರಿ ಮತ್ತು ಉತ್ತರಕಾಶಿಯಲ್ಲಿ ಮೇಘಸ್ಫೋಟ; ಬದರಿನಾಥ, ಯಮುನೋತ್ರಿ ಹೆದ್ದಾರಿ ಸೇರಿದಂತೆ ಉತ್ತರಾಖಂಡದ 247 ರಸ್ತೆಗಳು ಕ್ಲೋಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts